ಟೀಮ್ ಇಂಡಿಯಾ ಉಪ ನಾಯಕನಾಗಿ ಜಸ್ಪ್ರೀತ್ ಬುಮ್ರಾ ಆಯ್ಕೆ!

Prasthutha|

- Advertisement -

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯದಲ್ಲಿಯೇ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಶುಕ್ರವಾರ ತಂಡವನ್ನು ಪ್ರಕಟಿಸಿದೆ. ಗಾಯಗೊಂಡಿರುವ ರೋಹಿತ್ ಏಕದಿನ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕೆ.ಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ.

ಅದೇ ರೀತಿ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ.. ಬುಮ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವ ಕ್ರಮ ಶ್ಲಾಘಿಸಿದ್ದಾರೆ. ಬುಮ್ರಾ ಅವರನ್ನು ನೇಮಿಸಿ ಬಿಸಿಸಿಐ ಅದ್ಭುತ ನಿರ್ಧಾರ ಕೈಗೊಂಡಿದೆ ಎಂದು ಅವರು ಕೊಂಡಾಡಿದ್ದಾರೆ.

- Advertisement -

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವುದು ತಮಗೆ ತುಂಬಾ ಸಂತೋಷವಾಗಿದೆ. ತಂಡದ ಉಪ ನಾಯಕತ್ವದ ಜವಾಬ್ದಾರಿ ನೀಡುವ ಮೂಲಕ ಬಿಸಿಸಿಐ ಆಯ್ಕೆಗಾರರು ಮತ್ತೊಮ್ಮೆ ಅದ್ಭುತ ನಿರ್ಧಾರ ಕೈಗೊಂಡಿದ್ದಾರೆ. ಬುಮ್ರಾಗೆ ಇದು ಮೊದಲ ಹೆಜ್ಜೆಯಾಗಿದ್ದು, ಈ ಅವಕಾಶವನ್ನು ಅವರು ಸೂಕ್ತವಾಗಿ ಬಳಸಿಕೊಳ್ಳಲಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಆದರೆ ತಂಡದಲ್ಲಿ ಯುವ ಆಟಗಾರ ಶ್ರೇಯಸ್ ಅಯ್ಯರ್, ಐಪಿಎಲ್‌ ನಾಯಕರಾಗಿರುವ ಅನುಭವಿ ರಿಷಬ್ ಪಂತ್ ಇದ್ದರೂ ಆಯ್ಕೆಗಾರರು ಬುಮ್ರಾಗೆ ಒಲವು ತೋರಿದ್ದಾರೆ.

Join Whatsapp
Exit mobile version