ಟೋಕಿಯೋ: ಜಪಾನ್‌ನಲ್ಲಿ ಸರಣಿ ಪ್ರಬಲ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 57 ಕ್ಕೆ ಏರಿದೆ ಎಂದು ಇಶಿಕಾವಾ ಪ್ರಾಂತ್ಯದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ. ನೋಟೋ ಪರ್ಯಾಯ ದ್ವೀಪದ ವಾಜಿಮಾ ಮತ್ತು ಸುಜುನಲ್ಲಿ ಹೆಚ್ಚಿನ ಸಾವುನೋವುಗಳು ದೃಢಪಟ್ಟಿವೆ.
ಇಶಿಕಾವಾ ಕೇಂದ್ರ ಪ್ರಾಂತ್ಯದ ನೊಟೊ ಪರ್ಯಾಯ ದ್ವೀಪದಲ್ಲಿ ಸೋಮವಾರ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಕುಸಿದಿವೆ ಮತ್ತು ಸುನಾಮಿ ಎಚ್ಚರಿಕೆಗಳನ್ನು ಪೂರ್ವ ರಷ್ಯಾದವರೆಗೆ ಕಳುಹಿಸಲಾಗಿದೆ. ದೇಶದ ಹವಾಮಾನ ಕಚೇರಿಯ ಪ್ರಕಾರ, ದಿನ ದೇಶದಲ್ಲಿ ಒಟ್ಟು 155 ಭೂಕಂಪಗಳು ವರದಿಯಾಗಿವೆ ಎಂದು ವರದಿಯಾಗಿದೆ.