Home ಕರಾವಳಿ ಜನತಾ ಜಲಧಾರೆ ರಥ ಯಾತ್ರೆ ಏಪ್ರಿಲ್ 19ರಂದು ದ.ಕ.ಜಿಲ್ಲೆ ಪ್ರವೇಶ: ಸುಶೀಲ್ ನೊರೋನ್ಹಾ

ಜನತಾ ಜಲಧಾರೆ ರಥ ಯಾತ್ರೆ ಏಪ್ರಿಲ್ 19ರಂದು ದ.ಕ.ಜಿಲ್ಲೆ ಪ್ರವೇಶ: ಸುಶೀಲ್ ನೊರೋನ್ಹಾ

ಮಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರು ಈಗಾಗಲೇ ಸಮಗ್ರ ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ ನೀಡಿದ್ದಾರೆ. 19ನೇ ತಾರೀಕಿನಂದು ನೀರ ತೇರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಬಪ್ಪನಾಡಿನಲ್ಲಿ ಜಿಲ್ಲಾ ನಾಯಕರು ಈ ನೀರು ತೇರಿಗೆ ಸ್ವಾಗತಕೋರಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೋನ್ಹಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲೆಯ ಎಲ್ಲ ಕಡೆ ಈ ತೇರು ಸಂಚರಿಸಿ, ಎಲ್ಲ ನದಿಯ ನೀರನ್ನು ಸಂಗ್ರಹಿಸಿದ ಬಳಿಕ ಜಿಲ್ಲೆಯಿಂದ ಬೀಳ್ಕೊಡಲಾಗುವುದು. ಮೇಲ್ಮನೆ ಸದಸ್ಯರಾದ ಫಾರೂಕ್, ಭೋಜೇಗೌಡ ಮೊದಲಾದವರು ಇರುತ್ತಾರೆ. ರಾಜ್ಯದ 94 ನದಿಗಳ ನೀರು ಸಂಗ್ರಹಿಸಿ ಕಲಶದಲ್ಲಿ ಪೂಜಿಸುವ ಯೋಜನೆ ಇರುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕ್ಷಿತ್ ಸುವರ್ಣ, ಸುಮತಿ ಹೆಗ್ಡೆ, ರತ್ನಾಕರ್, ಶಮಿತಾ ಬಾನು, ಅಲ್ತಾಫ್, ಜಿನ್ನಪ್ಪ, ಇಕ್ಬಾಲ್ ಮೊದಲಾದ ಜಿಲ್ಲಾ ಜೆಡಿಎಸ್ ನಾಯಕರು ಉಪಸ್ಥಿತರಿದ್ದರು.

Join Whatsapp
Exit mobile version