ರಿಯಾಸಿ: ಜಮ್ಮು ಮತ್ತು ಕಾಶ್ಮೀರದ ಮಹೋರ್ ಉಪ ವಿಭಾಗದ ಚಸ್ಸಾನಾ ಗ್ರಾಮದ ಮನೆಯ ಸಮೀಪ ಬೆಳಗ್ಗೆ ಭೂಕುಸಿತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರೆಲ್ಲರೂ ಒಂದೇ ಮನೆಯವರಾಗಿದ್ದು, ರಾತ್ರಿ ಮಲಗಿದ್ದ ವೇಳೆ ಹಿಮಪಾತವಾಗಿದ್ದು, ಮನೆ ಕುಸಿತಕ್ಕೊಳಗಾಗಿ ದುರಂತ ನಡೆದಿದೆ.
ಎರಡು ತಿಂಗಳ ಮಗು, ತಾಯಿ ಮತ್ತು ಇತರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಈ ಪ್ರದೇಶವು ಭಾರೀ ಮಳೆಯಾದ ಕಾರಣ ಮನೆ ಕುಸಿದು ಅವಘಡ ಸಂಭವಿಸಿದೆ ಎಂದು ವಿಶೇಷ್ ರಿಯಾಸಿ ಜಿಲ್ಲಾಧಿಕಾರಿ ಪಾಲ್ ಮಹಾಜನ್ ತಿಳಿಸಿದ್ದಾರೆ.