Home ಟಾಪ್ ಸುದ್ದಿಗಳು ಜಮ್ಮು–ಕಾಶ್ಮೀರ ಚುನಾವಣೆಯಲ್ಲಿ ಮುಖಭಂಗ: ಪಕ್ಷ ವಿಸರ್ಜಿಸಿದ ಮುಫ್ತಿ

ಜಮ್ಮು–ಕಾಶ್ಮೀರ ಚುನಾವಣೆಯಲ್ಲಿ ಮುಖಭಂಗ: ಪಕ್ಷ ವಿಸರ್ಜಿಸಿದ ಮುಫ್ತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಘಟಕವನ್ನು ವಿಸರ್ಜಿಸಿದ್ದಾರೆ.


ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ಪಕ್ಷದ ನೂತನ ಪದಾಧಿಕಾರಿಗಳು ಹಾಗೂ ವಿವಿಧ ವಿಭಾಗಗಳನ್ನು ರಚಿಸಲಾಗುವುದು ಎಂದು ಪಕ್ಷ ತಿಳಿಸಿರುವುದಾಗಿ ಎಎನ್ ಐ ಟ್ವೀಟ್ ಮಾಡಿದೆ.


90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿರುವ ಪಿಡಿಪಿ, ಕೇವಲ ಮೂರು ಸ್ಥಾನಗಳನ್ನಷ್ಟೇ ಗೆದ್ದಿದೆ.


ಮಾಜಿ ಮುಖ್ಯಮಂತ್ರಿಯೂ ಆಗಿರುವ ಮುಫ್ತಿ ಅವರಿಗೆ ಈ ಫಲಿತಾಂಶವು ಮುಜುಗರವನ್ನುಂಟು ಮಾಡಿದೆ. ಅವರು ಫಲಿತಾಂಶದ ಬೆನ್ನಲ್ಲೇ, ಹಿರಿಯ ನಾಯಕರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಪುನರವಲೋಕನ ಸಭೆ ನಡೆಸಿದ್ದರು.

Join Whatsapp
Exit mobile version