Home ಟಾಪ್ ಸುದ್ದಿಗಳು ಜಮ್ಮು-ಕಾಶ್ಮೀರ: ಹೊತ್ತಿ ಉರಿದ ಜಾಮಿಯಾ ಮಸೀದಿ

ಜಮ್ಮು-ಕಾಶ್ಮೀರ: ಹೊತ್ತಿ ಉರಿದ ಜಾಮಿಯಾ ಮಸೀದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಾಮಿಯಾ ಮಸೀದಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿಗೊಳಗಾಗಿದೆ.


ಸೇನೆ, ಪೊಲೀಸ್, ಅಗ್ನಿಶಾಮಕದಳದ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.


ಈ ಕುರಿತು ಮಾಹಿತಿ ನೀಡಿರುವ ಜಾಮಿಯಾ ಮಸೀದಿಯ ಉಸ್ತುವಾರಿ, ದ್ರಾಸ್ ನ ಅತ್ಯಂತ ಹಳೆಯ ಮಸೀದಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ದುರದೃಷ್ಟಕರ ಸಂಗತಿ.ದ್ರಾಸ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಆದರೆ ಇಲ್ಲಿ ಒಂದೇ ಒಂದು ಅಗ್ನಿಶಾಮಕ ಸೇವೆಯೂ ಇಲ್ಲ. ಇಂತಹ ಘಟನೆಗಳು ಅನೇಕ ಬಾರಿ ನಡೆದಿದ್ದರೂ ಕೇಂದ್ರಾಡಳಿತ ಪ್ರದೇಶ ಇನ್ನೂ ಬುದ್ದಿ ಕಲಿತಿಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version