Home ಟಾಪ್ ಸುದ್ದಿಗಳು ಜಮ್ಮು-ಕಾಶ್ಮೀರ: ನದಿಗೆ ಬಸ್ ಉರುಳಿ 6 ಐಟಿಬಿಪಿ ಸಿಬ್ಬಂದಿ ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಜಮ್ಮು-ಕಾಶ್ಮೀರ: ನದಿಗೆ ಬಸ್ ಉರುಳಿ 6 ಐಟಿಬಿಪಿ ಸಿಬ್ಬಂದಿ ಸಾವು, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ): ಬಸ್ಸೊಂದು ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ನದಿಗೆ ಉರುಳಿದ ಪರಿಣಾಮ ಆರು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿರುವ ಭೀಕರ ಘಟನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಿದೆ.

ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಶ್ರೀನಗರದ ಸೇನಾ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ.

37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜೆ-ಕೆ ಪೊಲೀಸರನ್ನು ಹೊತ್ತ ನಾಗರಿಕ ಬಸ್ ಚಂದನ್ವರಿಯಿಂದ ಪಹಲ್ಗಾಮ್ ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಐಟಿಬಿಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮರನಾಥ ಯಾತ್ರೆಗಾಗಿ ಈ ಪ್ರದೇಶದಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು.

“ನಾವು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ವಿಪತ್ತು ನಿರ್ವಹಣೆಯ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ಯೋಧರಿಗೆ ಗಾಯಗಳಾಗಿರುವ ಸಾಧ್ಯತೆ ಇದೆ . ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Join Whatsapp
Exit mobile version