Home ಟಾಪ್ ಸುದ್ದಿಗಳು ಜಮ್ಮು : 25 ರೋಹಿಂಗ್ಯಾನ್ನರ ಬಂಧನ; ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದ ಅಮ್ನೆಸ್ಟಿ

ಜಮ್ಮು : 25 ರೋಹಿಂಗ್ಯಾನ್ನರ ಬಂಧನ; ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದ ಅಮ್ನೆಸ್ಟಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸುಮಾರು 25 ರೋಹಿಂಗ್ಯಾ ನಿರಾಶ್ರಿತರನ್ನು ಭಾರತ ಬಂಧಿಸಿರುವುದನ್ನು ಅಮ್ನೆಸ್ಟಿ ಇಂಡಿಯಾ ಖಂಡಿಸಿದ್ದು, ಈ ಕ್ರಮ ಮಾನವ ಹಕ್ಕುಗಳ ಜವಾಬ್ದಾರಿಗೆ ಹೀನಾಯ ಅವಮಾನ ಮತ್ತು ಅಂತಾರಾಷ್ಟ್ರೀಯ ಕಾನೂನಿಕ ಉಲ್ಲಂಘನೆ ಎಂದು ಅದು ಕರೆದಿದೆ.

ಸದ್ಯ ತಬ್ಲಿಗ್ ಜಮಾಅತ್’ಗೆ ಸೇರಿದ ಕನಿಷ್ಠ 25 ರೋಹಿಂಗ್ಯಾನ್ನರನ್ನು ಬಂಧಿಸಿ ಹೀರಾನಗರ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 22, 2022 ರಂದು ರೋಹಿಂಗ್ಯಾ ನಿರಾಶ್ರಿತರಾದ ಹಸೀನಾ ಬೇಗಂ ಅವರನ್ನು ಕಾನೂನು ಉಲ್ಲಂಘಿಸಿ ಮ್ಯಾನ್ಮಾರ್’ಗೆ ಅಕ್ರಮವಾಗಿ ಗಡೀಪಾರು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಆಮ್ನೆಸ್ಟಿ ಟ್ವೀಟ್ ಮೂಲಕ ತಿಳಿಸಿದೆ.

ಈ ಮಧ್ಯೆ ಹಿಂಸಾತ್ಮಕ ಸೈನಿಕಾ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಮ್ಯಾನ್ಮಾರ್’ನಿಂದ ಪಲಾಯಣಗೈದ ರೋಹಿಂಗ್ಯಾ ನಿರಾಶ್ರಿತರ ಬಗ್ಗೆ ಭಾರತದ ನಿರಾಸಕ್ತಿ ನಿಲುವನ್ನು ಅನೇಕ ಮಾನವ ಹಕ್ಕುಗಳ ಒಕ್ಕೂಟ ಖಂಡಿಸಿದೆ.

ಸುಮಾರು 40,000 ರೋಹಿಂಗ್ಯಾಗಳು ಭಾರತದಲ್ಲಿದ್ದು, ಆ ಪೈಕಿ ಕನಿಷ್ಠ 20,000 ಮಂದಿ UNHCR ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Join Whatsapp
Exit mobile version