ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮನೆ ಧ್ವಂಸ ಕಾರ್ಯಾಚರಣೆ: ಸುಪ್ರೀಮ್ ಕೋರ್ಟ್ ಮೊರೆಹೋದ ಜಮೀಯತ್ ಉಲಮಾ ಹಿಂದ್

Prasthutha|

ಲಖನೌ: ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಜಮೀಯತ್ ಉಲಮಾ ಹಿಂದ್ ಸುಪ್ರೀಮ್ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ಯಾವುದೇ ಪ್ರಕ್ರಿಯೆಗಳನ್ನು ಅನುಸರಿಸದೆ ಧ್ವಂಸವನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದೆ.

- Advertisement -

ಪ್ರವಾದಿ ವಿರುದ್ಧದ ಹೇಳಿಕೆಯನ್ನು ಖಂಡಿಸಿ ಉತ್ತರ ಪ್ರದೇಶದಾದ್ಯಂತ ಸಾವಿರಾರು ಮುಸ್ಲಿಮರು ಪ್ರತಿಭಟಿಸಿದ ಬಳಿಕ ಇದರ ಹಿಂದಿನ ಸೂತ್ರದಾರಿ ಎಂದು ಆರೋಪಿಸಿ ಜಾವೇದ್ ಮುಹಮ್ಮದ್, ಕುಟುಂಬವನ್ನು ಬಂಧಿಸಿತ್ತು. ಅಲ್ಲದೆ ಅವರನ್ನೂ ಒಳಗೊಂಡಂತೆ ಹಲವು ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿತ್ತು.

ಪ್ರಸಕ್ತ ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಜಮೀಯತ್ ಉಲೆಮಾ ಹಿಂದ್ ತಿಳಿಸಿದ್ದು, ವಾಯುವ್ಯ ದೆಹಲಿಯಲ್ಲಿ ಧ್ವಂಸ ಕಾರ್ಯಾಚರಣೆಯನ್ನು ನಿಲ್ಲಿಸಲು ಸುಪ್ರೀಮ್ ಕೋರ್ಟ್ ಈಗಾಗಲೇ ಆದೇಶಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.



Join Whatsapp