Home ಟಾಪ್ ಸುದ್ದಿಗಳು PFI ನಾಯಕರನ್ನು ಶುಕ್ರವಾರದ ಒಳಗೆ ಬಿಡುಗಡೆಗೊಳಿಸದಿದ್ದರೆ ಬೃಹತ್ ಹೋರಾಟ: ಜೈಪುರ ಮುಸ್ಲಿಂ ಸಂಘಟನೆಗಳು

PFI ನಾಯಕರನ್ನು ಶುಕ್ರವಾರದ ಒಳಗೆ ಬಿಡುಗಡೆಗೊಳಿಸದಿದ್ದರೆ ಬೃಹತ್ ಹೋರಾಟ: ಜೈಪುರ ಮುಸ್ಲಿಂ ಸಂಘಟನೆಗಳು

ನವದೆಹಲಿ: PFI ನಾಯಕರನ್ನು ಶುಕ್ರವಾರದ ಒಳಗೆ ಬಿಡುಗಡೆಗೊಳಿಸದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಜೈಪುರದ ಮುಸ್ಲಿಮ್ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಬಗ್ಗೆ ಸಂಘಟನೆಯ ಮುಖಂಡರೊಬ್ಬರು ಮಾತನಾಡಿ, ಕೇಂದ್ರ ಸರ್ಕಾರ ಎನ್ ಐಎ, ಇಡಿ ಸಹಿತ ಹಲವು ಸರ್ಕಾರಿ ಏಜನ್ಸಿಯನ್ನು ದುರುಪಯೋಗ ಮಾಡುತ್ತಿದೆ. ಅಲ್ಪಸಂಖ್ಯಾತರ ಮೇಲೆ ಶೋಷಣೆ ಮುಂದುವರೆಯುತ್ತಿವೆ ಎಂದು ಹೇಳಿದರು.
ಇದು ಕೇವಲ ಪಿಎಫ್ಐ ಸಂಘಟನೆಯನ್ನು ಮಾತ್ರ ಅಲ್ಲ, ಭಾರತದಲ್ಲಿರುವ ಹಲವು ಸಂಘಟನೆಯನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Join Whatsapp
Exit mobile version