Home ಟಾಪ್ ಸುದ್ದಿಗಳು ಗಲಾಟೆ ಮಾಡಿದರೆ ಜೈಲೇ ಗತಿ: ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ವಾರ್ನಿಂಗ್

ಗಲಾಟೆ ಮಾಡಿದರೆ ಜೈಲೇ ಗತಿ: ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ವಾರ್ನಿಂಗ್

‘ಹಿಜಾಬ್, ಹಲಾಲ್, ಆಝಾನ್ ಎಂದು ನಾಟಕ ಮಾಡಿದ್ರು, ಇದನ್ನು ನಾವು ಸರಿಪಡಿಸುತ್ತೇವೆ….

ವಿಜಯನಗರ : ಸೂಲಿಬೆಲೆಗೆ ಸಚಿವ ಎಂ.ಬಿ.ಪಾಟೀಲ್​​ ವಾರ್ನಿಂಗ್​​ ನೀಡಿದ್ದಾರೆ. ನಾಲ್ಕು ವರ್ಷ ಸೂಲಿಬೆಲೆ ಅನಾಹುತ ಮಾಡಿದ್ದು, ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಸೂಲಿಬೆಲೆಗೆ ಕ್ಲಾಸ್​ ತಗೆದುಕೊಂಡಿದ್ದಾರೆ.

ಹಿಟ್ಲರ್ ಸರ್ಕಾರ ಎಂದಿದ್ದಕ್ಕೆ MBP ವಾರ್ನಿಂಗ್​​ ಕೊಟ್ಟಿದ್ದು, ಸೂಲಿಬೆಲೆ ಮಾಡಿದ ಅನಾಹುತಗಳನ್ನ ನಾವು ಸರಿಪಡಿಸುತ್ತೇವೆ, ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಝಾನ್ ಎಂದು ನಾಟಕ ಮಾಡಿದರು. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಕಂಬಿಗತಿ ಗ್ಯಾರಂಟಿ ಎಂದು ಹೇಳಿದ್ದಾರೆ.

ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ರೋಸಿಹೋದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ರಕ್ಷಣೆ ವಿಷಯದಲ್ಲಿ ವಿಶೇಷ ಕಾಳಜಿ ತೋರಲಿದೆ ಎಂದು ಹೇಳಿದ್ದಾರೆ.

Join Whatsapp
Exit mobile version