Home ಟಾಪ್ ಸುದ್ದಿಗಳು ಜೈಲಿನ ಮೇಲೆ ದಾಳಿ;14 ಮಂದಿ ದಾರುಣ ಸಾವು, 24 ಖೈದಿಗಳು ಪರಾರಿ

ಜೈಲಿನ ಮೇಲೆ ದಾಳಿ;14 ಮಂದಿ ದಾರುಣ ಸಾವು, 24 ಖೈದಿಗಳು ಪರಾರಿ

ಮೆಕ್ಸಿಕೊ ಸಿಟಿ:  ಕಾರಾಗೃಹದ ಮೇಲೆ ಭಾನುವಾರ  ನಡೆದ ದಾಳಿಯಲ್ಲಿ ಹತ್ತು ಭದ್ರತಾ ಸಿಬ್ಬಂದಿ ಮತ್ತು ನಾಲ್ವರು ಕೈದಿಗಳು ಹತರಾದ ಘಟನೆ ಮೆಕ್ಸಿಕೊದ ಟೆಕ್ಸಾಸ್ನ ಎಲ್ ಪಾಸೊ ಪ್ರಾಂತ್ಯದ ಗಡಿಯಾಚೆಗಿನ ಸಿಯುಡಾಡ್ ಜುರೆಜ್ ಎಂಬಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾರಾಗೃಹದ ಬಳಿಗೆ ಬಂದ ಹಲವು ಶಸ್ತ್ರಸಜ್ಜಿತ ವಾಹನಗಳಲ್ಲಿ ಬಂದ ಬಂದೂಕುಧಾರಿಗಳು ಕಾವಲುಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮೆಕ್ಸಿಕನ್ ಸೈನಿಕರು ಮತ್ತು ಪೊಲೀಸರು ಜೈಲನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚಿಹೋವಾ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಆಗಸ್ಟ್ ನಲ್ಲಿ, ಇದೇ ಜೈಲಿನೊಳಗಿನ ಗಲಭೆ ನಡೆದಿದ್ದು,  ಜೈಲಿನಲ್ಲಿದ್ದ ಇಬ್ಬರು ಕೈದಿಗಳನ್ನು ಗುಂಪೊಂದು ಕೊಂದು ಹಾಕಿತ್ತು. ನಂತರ ಜುರೆಜ್ ಪಟ್ಟಣದ ಬೀದಿಗಳಿಗೂ ಹಿಂಸಾಚಾರ ಹಬ್ಬಿತ್ತು. ಹತ್ಯೆ ಮಾಡಿದ್ದ ಗುಂಪು ಜುರೆಜ್ ಪಟ್ಟಣದಲ್ಲಿ ಗುಂಡಿನ ದಾಳಿ ನಡೆಸಿದ್ದು, 11 ಜನರು ಮೃತಪಟ್ಟಿದ್ದರು.

ಭಾನುವಾರದ ಘಟನೆಗೆ ಸಂಬಂಧಿಸಿದಂತೆ  ನಾಲ್ವರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಂತರದ ಘಟನೆಯಲ್ಲಿ ಪೊಲೀಸರು ಇಬ್ಬರು ಬಂದೂಕುಧಾರಿಗಳನ್ನೂ ಕೊಂದಿದ್ದಾರೆ. ಘಟನೆಯಲ್ಲಿ 13 ಜನರು ಗಾಯಗೊಂಡಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡು 24 ಕೈದಿಗಳು ಪರಾರಿಯಾಗಿದ್ದಾರೆ.

Join Whatsapp
Exit mobile version