Home ಟಾಪ್ ಸುದ್ದಿಗಳು ಜಹಾಂಗೀರ್ ಪುರಿ ಕಾರ್ಯಾಚರಣೆ: ಇಂದಿನ ಪ್ರಮುಖ ಬೆಳವಣಿಗೆಗಳು

ಜಹಾಂಗೀರ್ ಪುರಿ ಕಾರ್ಯಾಚರಣೆ: ಇಂದಿನ ಪ್ರಮುಖ ಬೆಳವಣಿಗೆಗಳು

ನವದೆಹಲಿ: ಇತ್ತೀಚೆಗಷ್ಟೇ ಕೋಮು ಘರ್ಷಣೆ ನಡೆದಿದ್ದ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಬುಧವಾರ ಸ್ಥಳೀಯಾಡಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

  1,250 ಸಿಆರ್ ಪಿಎಫ್- ಕೇಂದ್ರೀಯ ಮೀಸಲು ಪೋಲೀಸು ಪಡೆಯವರನ್ನು ಮುಖ್ಯವಾಗಿ ಉತ್ತರ ದಿಲ್ಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.

ಇಂದಿನ ಪ್ರಮುಖ ಬೆಳವಣಿಗೆಗಳು:

•           “ಇದು ಭಯಂಕರ ತಪ್ಪು ಸಂದೇಶವನ್ನು ಕೊಡುತ್ತದೆ. ಸುಪ್ರೀಂ ಆದೇಶದ ಬಳಿಕವೂ ಇಲ್ಲಿ ಕೆಡವುವುದು ನಡೆದಿದೆ” – ಹಿರಿಯ ವಕೀಲ ದುಷ್ಯಂತ್ ದವೆ 

•           ಕೂಡಲೇ ಮುನಿಸಿಪಲ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಆದೇಶ ಪಾಲನೆ ಆದ ಬಗೆಗೆ ವರದಿ ಮಾಡಬೇಕು  – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ

•           ಉತ್ತರ ದಿಲ್ಲಿ ಮಹಾನಗರ ಪಾಲಿಕೆಯು ಕೂಡಲೆ ಜಹಾಂಗೀರ್ ಪುರಿಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಕೂಡಲೆ ಡೆಮಾಲಿಶನ್ ನಿಲ್ಲಿಸುವಂತೆ ಕ್ರಮ ಕೈಗೊಂಡಿತು. ಆದರೆ ಅದಾಗಲೆ ಹಲವರು ಬೀದಿಗೆ ಬಿದ್ದಿದ್ದರು.

•           ಕಾನೂನು ಸುವ್ಯವಸ್ಥೆಯ ಎಸ್ ಪಿ ದೀಪೇಂದ್ರ ಪಾಠಕ್ ಅವರು ಕೋರ್ಟು ಆದೇಶ ಯಥಾಸ್ಥಿತಿ ಪಾಲನೆಗೆ ಉರುಳಿಸುವುದು ನಿಲ್ಲಿಸಿದೆ ಎಂದು ಹೇಳಿದರು.

•           ಉತ್ತರ ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರು ಜಹಾಂಗೀರ್ ಪುರಿಯಲ್ಲಿ ನ್ಯಾಯಾಲಯದ ಆದೇಶ ಪಾಲನೆ ಆಗಿದೆ ಎಂದರು.

•           ಉತ್ತರ ದಿಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪಾಲಿಕೆ ಕಮಿಷನರ್ ಮತ್ತು ಪೊಲೀಸ್ ಕಮಿಷನರ್ ರಿಂದಲೂ ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ ಈ ಬಗ್ಗೆ ಖಚಿತತೆ ಬಯಸಿದರು.

•           ಸಿಪಿಎಂನ ಹಿರಿಯ ನಾಯಕಿ ಬೃಂದಾ ಕಾರಟ್ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶ ಹೊರ ಬೀಳುತ್ತಲೇ ಜಹಾಂಗೀರ್ ಪುರಿ ತಲುಪಿದರು.

•           ಸರ್ವೋಚ್ಚ ನ್ಯಾಯಾಲಯವು ಇಂದು ಬೆಳಿಗ್ಗೆ 10:45ಕ್ಕೆ ಯಥಾ ಸ್ಥಿತಿ ಪಾಲನೆಗೆ ಆದೇಶಿಸಿದೆ. ವಿಷಯ ತಿಳಿಯುತ್ತಲೆ ಇಲ್ಲಿ ಉರುಳಿಸುವಿಕೆ ನಿಂತಿದೆಯೇ ಎಂದು ಗಮನಿಸಲು ನಾನು ಬಂದುದಾಗಿ ಬೃಂದಾ ಅವರು ಸುದ್ದಿಗಾರರಿಗೆ ತಿಳಿಸಿದರು.

•           ಆದರೆ ಜಹಾಂಗೀರ್ ಪುರಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಒತ್ತುವರಿ ತೆರವು ಹೆಸರಿನಲ್ಲಿ ಬುಲ್ಡೋಜರ್ ಗಳು ಕಾರ್ಯಾರಂಭ ಮಾಡಿದ್ದವು. ಸುಪ್ರೀಂ ಕೋರ್ಟ್ ಆದೇಶ ತಲುಪುವುದಕ್ಕೆ ಮುಂಚೆಯೇ ನಾವು ನಮ್ಮ ಅಂಗಡಿ ಮತ್ತು ಮನೆಗಳನ್ನು ಕಳೆದುಕೊಂಡುದಾಗಿ ಹಲವರು ತಮ್ಮ ಗೋಳು ತೋಡಿಕೊಂಡರು. ರಸ್ತೆಯಲ್ಲಿ ಬಿದ್ದಿದ್ದ ಮನೆ, ಅಂಗಡಿ ಸಾಮಾನುಗಳು ಅದಕ್ಕೆ ಸಾಕ್ಷಿಯಾಗಿದ್ದವು, ನೂರಾರು ಫೋಟೋಗಳು ಸಹ ಅದನ್ನೇ ಹೇಳುತ್ತಿದ್ದವು.

•           ಸಿಆರ್ ಪಿಎಫ್ ಸರ್ಪಗಾವಲಿನಲ್ಲಿ ಈ ಡೆಮಾಲಿಶನ್ ನಡೆದಿದೆ. ಈ ಉರುಳಿಸುವಿಕೆಯು ಒತ್ತುವರಿ ಎಂಬ ಸುಳ್ಳು ನೆಪದಲ್ಲಿ ದ್ವೇಷ ರಾಜಕಾರಣಕ್ಕಾಗಿ ನಡೆದಿದೆ ಎಂದು ಹಲವರು ಹೇಳಿದರು.

•           ಎಎಪಿ ನಾಯಕ ಅಮಾನುತುಲ್ಲಾ ಖಾನ್ ಅವರು ಇದು ದಿಲ್ಲಿಯ ಶಾಂತ ವಾತಾವರಣವನ್ನು ಕದಡುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

•           ನಿಜ ಸುಪ್ರೀಂ ಕೋರ್ಟು ಆದೇಶದ ಪ್ರತಿ ನಮಗೆ ದೊರೆಯುವವರೆಗೆ ಇಲ್ಲಿ ಉರುಳಿಸುವಿಕೆ ನಡೆದಿದೆ. ಇದನ್ನು ಎನ್ ಸಿಎಂಡಿ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಮತ್ತು ವಿಶೇಷ ಸರ್ಕಲ್ ಸಿಪಿ ದೀಪೇಂದ್ರ ಪಾಠಕ್ ಒಪ್ಪಿಕೊಂಡರು.

•           ರಹೀಮಾ ಇತ್ತೀಚೆಗೆ ರೂ. 15,000 ಸಾಲ ಮಾಡಿ ತನ್ನ ಸಣ್ಣ ಅಂಗಡಿಯಲ್ಲಿ ಫ್ರಿಡ್ಜ್ ಇಟ್ಟಿದ್ದರು. “ಪೋಲೀಸರು, ಅಧಿಕಾರಿಗಳು ಏನೂ ಆಗುವುದಿಲ್ಲ, ಬರೇ ಚೆಕಿಂಗ್ ಅಷ್ಟೆ ಎಂದು ಹೇಳಿದರು. ಆದರೆ   ನನ್ನ ಅಂಗಡಿ ಉರುಳಿಸಿದ್ದಾರೆ” ಎಂದು ರಹೀಮಾ ಅಳಲು ತೋಡಿಕೊಂಡರು.

•           52ರ ರಮಣ್ ಜಾ ಅವರ ಪಾನ್ ಅಂಗಡಿ ಉರುಳಿಸಲಾಗಿದೆ. “ಯಾವ ನೋಟೀಸು ಕೊಟ್ಟಿಲ್ಲ, ಯಾವ ಮಾಹಿತಿಯನ್ನೂ ನೀಡಿಲ್ಲ. ನಾನು ಬೆಳಿಗ್ಗೆ ನನ್ನ ಗಾಡಿ ತೆಗೆಯಲು ಬೆಳಿಗ್ಗೆ ಮೂರು ಬಾರಿ ಬಂದೆ. ಆದರೆ ಪೊಲೀಸರು ಏನೂ ಆಗುವುದಿಲ್ಲ ಎಂದಿದ್ದರು. ಕೊನೆಗೆ ಅವರು ನನ್ನ ಅಂಗಡಿಯನ್ನು ಪುಡಿಗಟ್ಟಿದ್ದಾರೆ” ಎಂದು ಶೋಕ ವ್ಯಕ್ತಪಡಿಸಿದರು.

•           ಉತ್ತರ ದೆಹಲಿ ಮಹಾನಗರ ಪಾಲಿಕೆಯ ಕಮಿಷನರ್ ಸಂಜಯ್ ಗೋಯೆಲ್ ರಿಗೆ ಮಾಹಿತಿ ನೀಡಿದರೂ, ಸುಪ್ರೀಂ ಕೋರ್ಟ್ ಆದೇಶ ಪ್ರತಿ ನನ್ನ ಕೈಗೆ ಸಿಗುವವರೆಗೆ ಡೆಮಾಲಿಶನ್ ಎಂದು ಕೊನೆಯವರೆಗೆ  ಒಂದಷ್ಟು ಕೆಡವಿ ಸಂತೋಷ ಪಟ್ಟರು.

•           “ನಾನಿದನ್ನು ಕಾನೂನು ಅಧಿಕಾರಿಯಲ್ಲಿಗೆ ಒಯ್ಯುತ್ತೇನೆ. ಇದು ಸರಕಾರಿ ಜಾಗದ ಒತ್ತುವರಿ ವಿಷಯ. ಹಿಂದೆಯೂ ಇಲ್ಲಿ ಕೆಡವುವ ಕೆಲಸ ಆಗಿದೆ. ಆದರೆ ಜನರು ಮತ್ತೆ ಬಂದು ಒತ್ತುವರಿ ಮಾಡಿಕೊಳ್ಳುತ್ತಾರೆ” ಎಂದರು ಸಂಜಯ್ ಗೋಯೆಲ್. 

•           “ಒತ್ತುವರಿ ತೆರವು ಕಾರ್ಯಾಚರಣೆ ಇದು. ಈ ಜನರು ಒತ್ತುವರಿ ಮಾಡಿಕೊಳ್ಳುವುದಲ್ಲದೆ ಗೂಂಡಾಗಿರಿಯನ್ನೂ ಮಾಡುತ್ತಾರೆ. ಇವರಲ್ಲಿ ಕೆಲವರ ಹೆಸರು ಗಲಭೆ ಆರೋಪಿಗಳ ಪಟ್ಟಿಯಲ್ಲೂ ಇದೆ” ಎಂದು ಉತ್ತರ ದಿಲ್ಲಿ ಜಿಲ್ಲೆಯ ಸಿವಿಲ್ ಲೈನ್ಸ್ ವಲಯ ಅಧಿಕಾರಿ ನವೀನ್ ತ್ಯಾಗಿ ಹೇಳಿದರು.

•           ಇಂದು ಯಥಾ ಸ್ಥಿತಿ ಕಾಪಾಡಲು ಆದೇಶ ನೀಡಿದ ಸುಪ್ರೀಂ ಕೋರ್ಟು ಏಪ್ರಿಲ್ 21ರ ಗುರುವಾರ ಜಹಾಂಗೀರ್ ಪುರಿ ಡೆಮಾಲಿಶನ್ ವಿಚಾರವನ್ನು ವಿಚಾರಣೆಗೆ ತೆಗೆದುಕೊಳ್ಳುತ್ತದೆ.

•           ವಕೀಲೆ ಯಾದ ಶಾರೂಕ್ ಆಲಂ ಅವರು ದಿಲ್ಲಿ ಹೈ ಕೋರ್ಟಿನಲ್ಲಿಯೂ ಈ ಡೆಮಾಲಿಶನ್ ಬಗೆಗೆ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಎರಡು ಗಂಟೆಗಳಲ್ಲಿಯೇ ಅವರು ಪೆಟಿಶನ್ ಮುಂದುವರಿಯುವಂತೆ ಮಾಡಿದ್ದಾರೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಸುಪ್ರೀಂ ಕೋರ್ಟಿನಲ್ಲೂ ಇದನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

* ಜಹಾಂಗೀರ್ ಪುರಿಯಲ್ಲಿ ಮೊದಲು ಪುಡಿಯಾದದ್ದು ಜಮೀಲಾ ಅವರ ಗಾಡಿ. “ನಮಗೆ ಯಾವುದೇ ನೋಟಿಸ್ ನೀಡಿಲ್ಲ. ನಾನು ಮತ್ತು ನನ್ನ ಗಂಡ ಎರಡು ದಶಕಗಳಿಂದ ಇಲ್ಲಿ ಒಂದು ಗಾಡಿ ನಡೆಸುತ್ತಿದ್ದೇವೆ. ಇದೆಲ್ಲ ಸೇಡು ತೀರಿಸುವ ಮನೋಭಾವದಿಂದ ಆಗುತ್ತಿದೆ ಎಂದು ಜಮೀಲಾ ನಿಡುಸುಯ್ದರು.

* ಗೃಹ ಮಂತ್ರಿ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ದಿಲ್ಲಿಯ ಶಾಂತಿಯನ್ನು ಕದಡಲು ಪ್ರತಿಜ್ಞೆ ಮಾಡಿದಂತೆ ಹೊರಟಿದ್ದಾರೆ ಎಂದು ಎಎಪಿಯ ಅಮಾನುಲ್ಲಾ ಖಾನ್ ಆರೋಪಿಸಿದರು. ಕಳೆದ ವಾರದ ಒತ್ತುವರಿ ತೆರವು

*“ರಮದಾನ್ ತಿಂಗಳಲ್ಲಿ ಮನೆ ಉರುಳಿಸುವುದೆಂದರೆ ಒಂದು ನಿಶ್ಚಿತ ಸಮುದಾಯವನ್ನು ಗೋಳು ಹೊಯ್ದುಕೊಳ್ಳಲು ನಡೆಸಿರುವ ತಂತ್ರ. ಇಲ್ಲಿನ ವಾತಾವರಣವನ್ನು ಪೂರ್ಣ ಹದಗೆಡುವಂತೆ ಮಾಡುವ ಉದ್ದೇಶ ಇದರಲ್ಲಿ ಇದೆ.” ಎಂದು ಓಕ್ಲಾ ಶಾಸಕರು ತಿಳಿಸಿದರು.

* “ಇಂದು ಭಾರತದಲ್ಲಿ ಇಂಥ ಅಗ್ಗದ ರಾಜಕೀಯವೇ ನಡೆದಿರುವುದರಿಂದ, ಅದು ಇನ್ನಷ್ಟು ಕಾಲ ಮುಂದುವರಿಯುವ ಸೂಚನೆ ಇದೆ” ಎಂದು ವಕ್ಫ್ ಬೋರ್ಡಿನ ಚೇರ್ಮನ್ ರೂ ಆದ ಖಾನ್ ತಿಳಿಸಿದರು.

Join Whatsapp
Exit mobile version