Home ಟಾಪ್ ಸುದ್ದಿಗಳು ಜಗನ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ: ಪವನ್ ಕಲ್ಯಾಣ್

ಜಗನ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ: ಪವನ್ ಕಲ್ಯಾಣ್

ಅಮರಾವತಿ: ಆಂಧ್ರಪ್ರದೇಶದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ (ವೈಎಸ್ ಆರ್ ಸಿಪಿ) ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದು ನಟ, ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಹೇಳಿದ್ದಾರೆ.

ಗುಂಟೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನಸೇನಾ ಪಕ್ಷದ ಬೆಂಬಲಿಗರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಮಾತನಾಡಿದ ಅವರು ಈ ಧ್ವಂಸದಿಂದಲೇ ಸರ್ಕಾರದ ಪತನವು ಆರಂಭವಾಗಿದೆ. ಈ ಸರ್ಕಾರ ಬಹಳ ದಿನಗಳವರೆಗೆ ಇರುವುದಿಲ್ಲ ಎಂದರು.

ಗ್ರಾಮ ಒತ್ತುವರಿ ನೆಪದಲ್ಲಿ ಯಾವುದೇ ನೋಟಿಸ್‌ ನೀಡದೆ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಬಹುಪಾಲು ಮನೆಗಳು ಜನಾಸೇನಾ ಪಕ್ಷದ ಬೆಂಬಲಿಗರ ಮನೆಗಳು ಎಂದು ವರದಿಯಾಗಿದೆ.

Join Whatsapp
Exit mobile version