ಲವ್ ಜಿಹಾದ್ ಅಸ್ತಿತ್ವದಲ್ಲಿಲ್ಲ, ಅದೊಂದು ರಾಜಕೀಯ ಸೃಷ್ಠಿ. ಇಂತಹಾ ಯೋಜನೆಗಳಿಗೆ ಅಲ್ಪಸಂಖ್ಯಾತರು ಬಲಿಯಾಗಬಾರದು ಎಂದು ಯಾಕೂಬಾಯ ಪಂಥದ ಧರ್ಮ ಗುರು ಡಾ. ಗೀವರ್ಗೀಸ್ ಮಾರ್ ಕೂರಿಲೋಸ್ ಹೇಳಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಸಂಘಪರಿವಾರದೊಂದಿಗೆ ಯಾವುದೇ ಕಾರಣಕ್ಕೂ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲವ್ ಜಿಹಾದ್ ಅನ್ನು ಪರಿಶೀಲಿಸಬೇಕು ಎಂದು ಸಿಪಿಐಎಂ ಮುಖಂಡ ಜೋಸ್ ಕೆ ಮಣಿ ಅವರ ಹೇಳಿಕೆಗೆ ಪ್ರತಿಯಿಕ್ರಿಯಿಸಿದ ಅವರು, ಅಲ್ಪಸಂಖ್ಯಾತರನ್ನು ವಿಭಜಿಸುವುದು ಫ್ಯಾಸಿಸ್ಟ್ ಅಜೆಂಡಾ. ಅಲ್ಪಸಂಖ್ಯಾತರು ಇದರ ವಿರುದ್ಧ ಒಗ್ಗಟ್ಟಾಗಿ ನಿಲ್ಲಬೇಕು. ಇಂತಹ ಫ್ಯಾಸಿಸ್ಟ್ ವರ್ಗಗಳ ಜೊತೆ ಎಡಪಂಥೀಯರು ಸಹ ರಾಜಿ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ. ಸಿಪಿಎಂ ಈಗ ಕಾಂಗ್ರೆಸ್ ನೀತಿಯನ್ನು ಅನುಸರಿಸುತ್ತಿದೆ. ಇದರ ವಿರುದ್ಧ ಹೊಸ ಎಡಪಂಥೀಯ ಪಕ್ಷ ಉಗಮವಾಗಬೇಕಿದೆ ಎಂದು ಅವರು ಕರೆ ನೀಡಿದರು.