Home ಟಾಪ್ ಸುದ್ದಿಗಳು ಮಧ್ಯಪ್ರದೇಶ: ನಿಯಮಕ್ಕೆ ವಿರುದ್ಧವಾಗಿ ನಿವೇಶನ ಮಾರಾಟ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಮಧ್ಯಪ್ರದೇಶ: ನಿಯಮಕ್ಕೆ ವಿರುದ್ಧವಾಗಿ ನಿವೇಶನ ಮಾರಾಟ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಮಧ್ಯಪ್ರದೇಶ: ನಗರ ಯೋಜನೆ ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ನಾಲ್ವರ ವಿರುದ್ಧ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸದ್ಯ ಈ ಅರೋಪಿಗಳು ಮತ್ತು ಇತರೆ ನಾಲ್ವರು ಮುಂದೆ ಯಾವುದೇ ನಿವೇಶನಗಳನ್ನು ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪ್ರಾಧಿಕಾರದ ನಿಯಮಾವಳಿಯನ್ನು ಉಲ್ಲಂಘಿಸಿ ಒಟ್ಟು 110 ನಿವೇಶನಗಳನ್ನು ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ. ಇಳಯರಾಜ್ ಟಿ. ಆದೇಶದ ಮೇರೆಗೆ ಈ ಕ್ರಮಕ್ಕೆ ಮುಂದಾಗಲಾಗಿದೆ.

ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ನ್ಯಾನ್ಸಿ ಸ್ವಾಮಿ, ಸುಂದರ್ ಲಾಲ್ ಪಟೇಲ್, ರಾಜೇಂದ್ರ ಪ್ರಸಾದ್ ಪಟೇಲ್ ಹಾಗೂ ಹಿಲಾಲ್ ಅಹ್ಮದ್ ಅನ್ಸಾರಿ ಎಂದು ಗುರುತಿಸಿರುವುದಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪಿ.ಕೆ. ಸೇನ್ ಗುಪ್ತಾ ಅವರು ತಿಳಿಸಿದ್ದಾರೆ. ನಿವೇಶನಗಳನ್ನು ಮಾರಾಟ ಮಾಡಲು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಯಾವುದೇ ಪರವಾನಿಗೆ ಅಥವಾ ಅನುಮತಿಯನ್ನು ಅವರು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇತರರನ್ನು ಝಿಯಾ ಉಲ್ ಹಕ್, ಹೈದರ್ ಅಲಿ, ಮುಹಮ್ಮದ್ ಅಕ್ಬರ್ ಮತ್ತು ಸೂರಜ್ ಪ್ರಸಾದ್ ಅವರು ಪ್ಲಾಟ್’ಗಳನ್ನು ಮಾರಾಟ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಸೇನ್ ಗುಪ್ತಾ ತಿಳಿಸಿದ್ದಾರೆ.

Join Whatsapp
Exit mobile version