Home ಟಾಪ್ ಸುದ್ದಿಗಳು ಮೋದಿಯನ್ನು ಟೀಕಿಸಿದರೆ ದೇಶವನ್ನೇ ಟೀಕಿಸಿದಂತೆ ಎಂದ ಜೆ.ಪಿ ನಡ್ಡಾ

ಮೋದಿಯನ್ನು ಟೀಕಿಸಿದರೆ ದೇಶವನ್ನೇ ಟೀಕಿಸಿದಂತೆ ಎಂದ ಜೆ.ಪಿ ನಡ್ಡಾ

ಮಣಿಪುರ : ಪ್ರಧಾನಿ ಮೋದಿಯನ್ನು ಟೀಕಿಸಿದರೆ ರಾಷ್ಟ್ರವನ್ನು ಟೀಕಿಸಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ಅವರನ್ನ ಇನ್ನಿತರ ಪಕ್ಷಗಳು ಟೀಕಿಸುವ ಉದ್ದೇಶವನ್ನು ಹೊಂದಿರುತ್ತಾರೆ. ಆದರೆ ಅವರನ್ನು ಟೀಕಿಸುವಾಗ ಅವರು ರಾಷ್ಟ್ರವನ್ನು ಟೀಕಿಸುತ್ತಿದ್ದಾರೆ ಎಂಬುದನ್ನು ಮರೆತುಬಿಡುತ್ತಾರೆ” ಎಂದರು.ಇನ್ನು ವಿಪಕ್ಷಗಳು ಭ್ರಷ್ಟಾಚಾರ ಮತ್ತು ಆಯೋಗದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಭಾರತವನ್ನು ಮುಂದೆ ಕೊಂಡೊಯ್ಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

“ಮಣಿಪುರದಲ್ಲಿ ಬಿಜೆಪಿಯ ಚಿಹ್ನೆ ಅರಳಿದರೆ ಮಾತ್ರ ರಾಜ್ಯ ಪ್ರಗತಿಯಾಗುತ್ತದೆ. ನಿಮಗೆ ಬಂಡಾಯ, ಡ್ರಗ್ಸ್, ಅಶಾಂತಿ, ಆಳ್ವಿಕೆ, ಎನ್‌ಕೌಂಟರ್‌ ಬೇಕೇ ಅಥವಾ ಸಮೃದ್ಧಿ, ಶಾಂತಿ, ಔಷಧಗಳು ಅಥವಾ ಕ್ರೀಡೆಗಳು ಬೇಕೋ ಎಂಬುದನ್ನು ನೀವು ಆರಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.

Join Whatsapp
Exit mobile version