Home ಟಾಪ್ ಸುದ್ದಿಗಳು ಜೆ.ಜೆ. ನಗರದಲ್ಲಿ ಯುವಕ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ ನೀಡಿದ ಶಾಸಕ ಝಮೀರ್...

ಜೆ.ಜೆ. ನಗರದಲ್ಲಿ ಯುವಕ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ ನೀಡಿದ ಶಾಸಕ ಝಮೀರ್ ಅಹ್ಮದ್

ಬೆಂಗಳೂರು: ಬೆಂಗಳೂರಿನ ಜೆ.ಜೆ. ನಗರದಲ್ಲಿ ಹತ್ಯೆಯಾದ ಚಂದ್ರು ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ ಶಾಸಕ ಝಮೀರ್ ಅಹ್ಮದ್, ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ ನೀಡಿದ್ದಾರೆ.

 ಗುಡ್ಡದಹಳ್ಳಿಯಲ್ಲಿ ರೋಲ್ ತಿನ್ನುವ ವಿಚಾರಕ್ಕೆ ಕಳೆದ ರಾತ್ರಿ ಯುವಕರ ನಡುವೆ ಘರ್ಷಣೆ ನಡೆದಿತ್ತು. ಇದು ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘರ್ಷಣೆಯಿಂದ ತೀವ್ರವಾಗಿ ಗಾಯಗೊಂಡ ಚಂದ್ರು ನನ್ನು ಆಸ್ಪತ್ರೆ ದಾಖಲು ಮಾಡಿದ್ದರೂ, ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಬಿ ಝಡ್ ಜಮೀರ್ ಅಹಮದ್ ಖಾನ್ ಅವರು  ನಿನ್ನೆ ಚಂದ್ರುವಿನ ಮನೆಗೆ ತೆರಳಿ ಅವರ ಸಹೋದರ ಮತ್ತು ಅಜ್ಜಿಗೆ ಸಾಂತ್ವನ ಹೇಳಿದ್ದಾರೆ. ಹಾಗೆಯೇ ಅವರ ಜೀವನೋಪಾಯಕ್ಕಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಚಂದ್ರುವಿನ ಅಜ್ಜಿ ಮಾರುಕಟ್ಟೆಯಲ್ಲಿ ಪುಟ್ ಪಾತ್ ನಲ್ಲಿ  ವ್ಯಾಪಾರ ಮಾಡಿಕೊಂಡಿದ್ದರು. ಆತನ ಕೊಲೆ ದುಖ ತಂದಿದೆ ಎಂದು ತಿಳಿಸಿದ ಜಮೀರ್, ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸಿದ್ದಾರೆ. ಶಾಸಕರೊಂದಿಗೆ ಚೆಲುವಾದಿಪಾಳ್ಯದ ಕಾಂಗ್ರೆಸ್ ನಾಯಕ ಅಮ್ಜದ್ ಖಾನ್, ಮಗೇಶ್ವರಿ, ವಿನಾಯಕಾ, ಜೈ ಕರ್ನಾಟಕ ಸಂಘಟನೆ ಮುಖಂಡರಾದ ವಸಂತ್ ಉಪಸ್ಥಿತರಿದ್ದರು.

https://prasthutha.com/wp-content/uploads/2022/04/WhatsApp-Video-2022-04-06-at-11.52.40-AM-1.mp4

Join Whatsapp
Exit mobile version