ಇವಾನಾ ಟ್ರಂಪ್ ರದ್ದು ಸಹಜ ಸಾವಲ್ಲ: ತಲೆಯಲ್ಲಿ ಬಲವಾದ ಗಾಯದಿಂದ ನಿಧನ: ವೈದ್ಯಕೀಯ ಪರೀಕ್ಷೆಯಲ್ಲಿ ಬಹಿರಂಗ

Prasthutha|

ನ್ಯೂಯಾರ್ಕ್: ನಿನ್ನೆ ಮೃತಪಟ್ಟಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ ರದ್ದು ಸಹಜ ಸಾವಲ್ಲ, ತಲೆಗೆ ಬಿದ್ದ ಬಲವಾದ ಗಾಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ನ ಮುಖ್ಯ ವೈದ್ಯಕೀಯ ಪರೀಕ್ಷಕರು ತಿಳಿಸಿದ್ದಾರೆ.

- Advertisement -

73 ವರ್ಷದ ಇವಾನಾ ತನ್ನ ಮ್ಯಾನ್ಹ್ಯಾಟನ್ ಮನೆಯಲ್ಲಿ ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅಚ್ಚರಿಯ ಮಾಹಿತಿ ಹೊರಬಿದ್ದಿದೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸ್ ಇಲಾಖೆಯು ಮೊದಲ ಸುತ್ತಿನ ವಿಚಾರದಲ್ಲಿ ಅವರು ಆಕಸ್ಮಿಕವಾಗಿ ಮೆಟ್ಟಿಲಿನ ಕೆಳಗೆ ಬಿದ್ದು ಸತ್ತಿದ್ದಾರೆ ಎಂದು ವರದಿ ಮಾಡಿದ್ದು ಯಾವುದೇ ಅಪರಾಧ ಕುರುಹುಗಳು ತೋರುವುದಿಲ್ಲ ಎಂದು ಹೇಳಿತ್ತು. ಆದರೆ ಈಗ ವೈದ್ಯಕೀಯ ಪರೀಕ್ಷೆಯಲ್ಲಿ ಇವಾನಾರದ್ದು ಸಹಜ ಸಾವಲ್ಲ ಎಂದು ಘೋಷಣೆಯಾಗಿದೆ.

- Advertisement -

ರೂಪದರ್ಶಿ ಇವಾನಾ ಅವರು 1977 ರಲ್ಲಿ ಉದಯೋನ್ಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗಿದ್ದರು. ಅವರು ತಮ್ಮ ಜೀವನದಲ್ಲಿ ನಾಲ್ಕು ಬಾರಿ ಮದುವೆಯಾಗಿದ್ದರು. ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮದುವೆಯಾಗುವ ಮೊದಲು ಒಂದು ಬಾರಿ ಮತ್ತು ಟ್ರಂಪ್ ನೊಂದಿಗೆ ವಿಚ್ಛೇದನಗೊಂಡ ನಂತರ ಎರಡು ಬಾರಿ ಮದುವೆಯಾಗಿದ್ದಾರೆ.

Join Whatsapp
Exit mobile version