Home ಟಾಪ್ ಸುದ್ದಿಗಳು ನಾರಾಯಣ ಗುರುಗಳ ಮೇಲಿನ ಪ್ರೀತಿಯಲ್ಲ, ಒತ್ತಡವೇ ಕಾರಣ : ಸಚಿವ ಸುನಿಲ್ ಕುಮಾರ್ ವಿರುದ್ಧ ಖರ್ಗೆ...

ನಾರಾಯಣ ಗುರುಗಳ ಮೇಲಿನ ಪ್ರೀತಿಯಲ್ಲ, ಒತ್ತಡವೇ ಕಾರಣ : ಸಚಿವ ಸುನಿಲ್ ಕುಮಾರ್ ವಿರುದ್ಧ ಖರ್ಗೆ ಕಿಡಿ

ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸುವಂತೆ ಸಚಿವ  ಕಾರ್ಕಳ ಸುನಿಲ್ ಕುಮಾರ್ ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಪ್ರಿಯಾಂಕ ಖರ್ಗೆ,  ಈ ಜಾಗೃತಿಗೆ ನಾರಾಯಣ ಗುರುಗಳ ಬಗ್ಗೆ ಪ್ರೀತಿಯಲ್ಲ, ಸಮುದಾಯದ ಒತ್ತಡವೇ ಕಾರಣ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,  ಕಾರ್ಕಳ ಸುನಿಲ್ ಅವರೇ ಕೊನೆಗೂ ನಿದ್ದೆಯಿಂದ ಎದ್ದಿದ್ದೀರಿ, ಈ ಜಾಗೃತಿಗೆ ಕಾರಣ ನಾರಾಯಣ ಗುರುಗಳ ಬಗ್ಗೆ ತಮಗಿರುವ ಪ್ರೀತಿಯಲ್ಲ, ಸಮುದಾಯದ ಒತ್ತಡ ಎನ್ನುವುದೇ ವಿಪರ್ಯಾಸ. ಹಾಗೆಯೇ ಇತರ ಹಲವು ಮಹನೀಯರಿಗಾದ ಅವಮಾನದ ವಿರುದ್ಧ ಧ್ವನಿ ಎತ್ತುತ್ತೀರಿ ಎಂದು ನಿರೀಕ್ಷಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸುವಂತೆ ಕೋರಿ ಸಚಿವ  ಸುನಿಲ್ ಕುಮಾರ್, ಶಿಕ್ಷಣ ಸಚಿವರಿಗೆ ಅರ್ಜಿ ಸಲ್ಲಿಸಿದ್ದರು.

Join Whatsapp
Exit mobile version