Home ಟಾಪ್ ಸುದ್ದಿಗಳು ಯುಎಇ: ರಾಸ್ ಅಲ್ ಖೈಮಾದಲ್ಲಿ ಪರ್ವತಾರೋಹಣ ಮಾಡುವ ವೇಳೆ ಪ್ರಪಾತಕ್ಕೆ ಬಿದ್ದ ಯುವಕ : ಪೊಲೀಸರಿಂದ...

ಯುಎಇ: ರಾಸ್ ಅಲ್ ಖೈಮಾದಲ್ಲಿ ಪರ್ವತಾರೋಹಣ ಮಾಡುವ ವೇಳೆ ಪ್ರಪಾತಕ್ಕೆ ಬಿದ್ದ ಯುವಕ : ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ

 ರಾಸ್ ಅಲ್ ಖೈಮಾ: ರಾಸ್ ಅಲ್ ಖೈಮಾದ ಘಲಿಲಾ ಪರ್ವತದಲ್ಲಿ ಪರ್ವತಾರೋಹಣ ವೇಳೆಯಲ್ಲಿ ಬಿದ್ದು ತೀವ್ರ ಗಾಯಗೊಂಡ 40 ವರ್ಷದ ಇಟಾಲಿಯನ್ ಪ್ರಜೆಯನ್ನು ರಾಷ್ಟ್ರೀಯ ಶೋಧ ಮತ್ತು ರೆಸ್ಕ್ಯೂ ತಂಡ ರಾಸ್ ಅಲ್ ಖೈಮಾ ಪೊಲೀಸರ ಸಹಯೋಗದೊಂದಿಗೆ ತಮ್ಮ ಕ್ಷಿಪ್ರ ಕಾರ್ಯಾಚರಣೆಯಿಂದ ರಕ್ಷಿಸಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪರ್ವತ ಪ್ರದೇಶದಲ್ಲಿ ಯುವಕನೊಬ್ಬ ಸಿಕ್ಕಿ ಹಾಕಿಕೊಂಡ ಕುರಿತು ರಾಸ್ ಅಲ್ ಖೈಮಾ ಪೊಲೀಸ್ ಕಂಟ್ರೋಲ್ ರೂಮಿಗೆ ಬಂದ ಸಂದೇಶದ ನಂತರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಈ ವಾರದ ಆರಂಭದಲ್ಲಿ, ಕುಟುಂಬ ಪ್ರವಾಸಕ್ಕೆ ಹೋಗಿದ್ದ ವೇಳೆ ಎಮಿರೇಟ್‌ನ ಪರ್ವತಗಳಲ್ಲಿ ಕಳೆದುಹೋದ ಎರಡು ವರ್ಷದ ಬಾಲಕನನ್ನು ರಾಸ್ ಅಲ್ ಖೈಮಾ ರೆಸ್ಕ್ಯೂ ತಂಡಗಳು ಕಂಡು ಹಿಡಿದಿತ್ತು. 12 ಗಂಟೆಗಳ ಹುಡುಕಾಟದ ನಂತರ ಬಾಲಕ ಪತ್ತೆಯಾಗಿದ್ದ.  ಭಾರತೀಯ ಮೂಲದ ಹುಡುಗನನ್ನು ತನ್ನ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಅಧಿಕಾರಿಗಳಿಗೆ ಸಹಾಯ ಮಾಡಿರುವ ಪ್ರಯತ್ನಕ್ಕಾಗಿ ರಾಸ್ ಅಲ್ ಖೈಮಾ ಪೊಲೀಸರು ಇಬ್ಬರು ಎಮಿರಾಟಿಗಳನ್ನು ಗೌರವಿಸಿದ್ದಾರೆ.

ರಾಸ್ ಅಲ್ ಖೈಮಾದ ಪರ್ವತ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಯುವಕನ ರಕ್ಷಣಾ ಕಾರ್ಯಾಚರಣೆ
Join Whatsapp
Exit mobile version