Home ಟಾಪ್ ಸುದ್ದಿಗಳು ಇಟಲಿ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಮಾರಿಯೋ ದ್ರಾಘಿ

ಇಟಲಿ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಮಾರಿಯೋ ದ್ರಾಘಿ

ರೋಮ್: ಇಟಲಿಯ ಪ್ರಧಾನಿ ಮಾರಿಯೋ ದ್ರಾಘಿ ಅವರು ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಸರ್ಗಿಯೊ ಮಟ್ಟರೆಲ್ಲಾ ಅವರಿಗೆ ಹಸ್ತಾಂತರಿಸಿದ್ದಾರೆ.

ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ನ ಮಾಜಿ ಮುಖ್ಯಸ್ಥರಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ದ್ರಾಘಿ, ಫೆಬ್ರವರಿ 2021 ರಲ್ಲಿ ರಚಿಸಲಾದ ರಾಷ್ಟ್ರೀಯ ಒಕ್ಕೂಟವು ಮುರಿದುಬಿದ್ದ ನಂತರ ಗುರುವಾರ ತಮ್ಮ ರಾಜೀನಾಮೆಯನ್ನು ಹಸ್ತಾಂತರಿಸಿದರು.

ಮಟ್ಟರೆಲ್ಲಾ ಸಂಸತ್ತನ್ನು ವಿಸರ್ಜಿಸುತ್ತಾರೆಯೇ ಅಥವಾ ಮುಂಚಿತವಾಗಿ ಚುನಾವಣೆಗಳನ್ನು ಕರೆಯುತ್ತಾರೆಯೇ ಎಂದು ಹೇಳಿಕೆಯಲ್ಲಿ ತಿಳಿಸಲಾಗಿಲ್ಲ. ಈ ವಾರದ ಆರಂಭದಲ್ಲಿ ಅವರು ಸಂಸತ್ತನ್ನು ವಿಸರ್ಜಿಸಿ ಅಕ್ಟೋಬರ್ ನಲ್ಲಿ ಮುಂಚಿತವಾಗಿ ಚುನಾವಣೆಗಳನ್ನು ಕರೆಯುವ ಸಾಧ್ಯತೆಯಿದೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ದ್ರಾಘಿ ರಷ್ಯಾ ಉಕ್ರೇನ್ ಕದನದ ವೇಳೆ ರಷ್ಯಾದ ವಿರುದ್ಧ ಉಕ್ರೇನ್ ಗೆ ಹಣಕಾಸಿನ ನೆರವು ನೀಡುವ ಮೂಲಕ ಬೆಂಬಲ ಸೂಚಿಸಿದ್ದರು, ಕೋವಿಡ್-19 ತುರ್ತು ಪರಿಸ್ಥಿತಿಯನ್ನು ನಿಭಾಯಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

Join Whatsapp
Exit mobile version