ಬೆಳ್ಳಂಬೆಳಗ್ಗೆ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳಿಗೆ ‘ಐಟಿ’ ಶಾಕ್

Prasthutha|

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಐಟಿ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಕೆಲ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

- Advertisement -

ನಗರದ ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆ, ರೇವಾ ಯೂನಿವರ್ಸಿಟಿ ಸೇರಿದಂತೆ ನಗರದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಆದಾಯ ತೆರಿಗೆ ವಿವರ ಸಲ್ಲಿಕೆಯಲ್ಲಿ ಲೋಪದೋಷ, ತೆರಿಗೆ ವಂಚನೆ, ಅಕ್ರಮದ ಮಾಹಿತಿ ಆಧಾರದ ಮೇಲೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ.

ಈ ಹಿಂದೆ ರೇವಾ ಹಾಗೂ ದಿವ್ಯಾ ಗ್ರೂಪ್‌ ಮೇಲೆ ಶುಲ್ಕ ವಸೂಲಿ ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಮಾರು 70 ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು ಸಂಸ್ಥೆಗಳ ದಾಳಿ ನಡೆಸಿದ್ದಾರೆ.

- Advertisement -

  ವಿದೇಶಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ‌ ಶುಲ್ಕ ಸಂಗ್ರಹ ಆರೋಪ ಹಾಗೂ ಸರ್ಕಾರದ ನಿಯಮಾವಳಿಗಳನ್ನ ಮೀರಿ ಪೇಮೆಂಟ್ ಕೋಟಾ ಸೀಟ್ ಗಳನ್ನು ಮ್ಯಾನೇಜ್ ಮೆಂಟ್ ಗಳು ಬ್ಲಾಂಕಿಂಗ್ ಮಾಡಿ ಹೆಚ್ಚಿಸಿರುವ ಆರೋಪದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.



Join Whatsapp