Home ಟಾಪ್ ಸುದ್ದಿಗಳು ಮಂಗಳೂರು | ಮಾಜಿ ಸಚಿವ ಯು.ಟಿ. ಖಾದರ್ ಸಹೋದರನ ಮನೆ ಮೇಲೂ ಐಟಿ ದಾಳಿ

ಮಂಗಳೂರು | ಮಾಜಿ ಸಚಿವ ಯು.ಟಿ. ಖಾದರ್ ಸಹೋದರನ ಮನೆ ಮೇಲೂ ಐಟಿ ದಾಳಿ

ಮಂಗಳೂರು : ಶಾಸಕ ಯು.ಟಿ. ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಗರದ ಲೈಟ್ ಹೌಸ್ ಅಪಾರ್ಟ್’ಮೆಂಟ್ ವೊಂದರಲ್ಲಿನ ಇಫ್ತಿಕಾರ್ ಅಲಿ ಇರುವ ಫ್ಲ್ಯಾಟ್ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಸುಮಾರು 11 ಮೆಡಿಕಲ್ ಕಾಲೇಜು, ಆಸ್ಪತ್ರೆ ಮಾಲೀಕರ ಮನೆಗಳಿಗೆ ಐಟಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಯು.ಟಿ. ಇಫ್ತಿಕಾರ್ ಮನೆಗೂ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಗೊಳಗಾದ ಸಂಸ್ಥೆಯೊಂದರಲ್ಲಿ ಇಫ್ತಿಕಾರ್ ಗೆ ಪಾಲುದಾರಿಕೆ ಇತ್ತು ಎಂಬ ಸಂದೇಹದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

Join Whatsapp
Exit mobile version