Home ಕರಾವಳಿ ಬೆಳ್ತಂಗಡಿಯಲ್ಲಿ ಐಟಿ ದಾಳಿ: ಮಾಜಿ ಸಚಿವ ಗಂಗಾಧರ ಗೌಡರ ಮನೆಯಲ್ಲಿ 30 ಲಕ್ಷ ರೂ. ಹಣ...

ಬೆಳ್ತಂಗಡಿಯಲ್ಲಿ ಐಟಿ ದಾಳಿ: ಮಾಜಿ ಸಚಿವ ಗಂಗಾಧರ ಗೌಡರ ಮನೆಯಲ್ಲಿ 30 ಲಕ್ಷ ರೂ. ಹಣ ಪತ್ತೆ


ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ 30 ಲಕ್ಷ ರೂಪಾಯಿ ಹಣ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.


ಐಟಿ ಅಧಿಕಾರಿಗಳ ದಾಳಿ ವೇಳೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯ ಮೇಲೆ ದಾಳಿ ವೇಳೆ 30 ಲಕ್ಷ ರೂಪಾಯಿ ಹಣ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಪಕ್ಷದ ಟಿಕೆಟ್ ರಕ್ಷಿತ್ ಶಿವರಾಂ ಅವರಿಗೆ ಲಭಿಸುತ್ತಲೇ ರಾಜಕೀಯ ಚಟುವಟಿಕೆಗಳಿಂದ ಹಿಂದೆ ಸರಿದಿದ್ದರು. ಇದೀಗ ಐಟಿ ದಾಳಿ ಶಾಕ್ ನೀಡಿದೆ.


ಮನೆಯಲ್ಲಿರುವ ಸ್ವತ್ತು, ಕಾಲೇಜಿನ ದಾಖಲೆ ಸಹಿತ ಪೊಲೀಸ್ ತಂಡದ ಸಮ್ಮುಖದಲ್ಲಿ ತಪಾಸಣೆ ಕೈಗೊಂಡಿದೆ.

Join Whatsapp
Exit mobile version