Home ಟಾಪ್ ಸುದ್ದಿಗಳು ಗುತ್ತಿದಾರರ ಮನೆ, ಕಚೇರಿಯಲ್ಲಿ 4ನೇ ದಿನವೂ ಐಟಿ ಶೋಧ

ಗುತ್ತಿದಾರರ ಮನೆ, ಕಚೇರಿಯಲ್ಲಿ 4ನೇ ದಿನವೂ ಐಟಿ ಶೋಧ

ಬೆಂಗಳೂರು: ಆದಾಯ ತೆರಿಗೆ ವಂಚನೆ ಸಂಬಂಧಿಸಿದಂತೆ ನಗರದಲ್ಲಿ ಸತತ ನಾಲ್ಕನೇ ದಿನವೂ ಐಟಿ ದಾಳಿ ಮುಂದುವರಿದಿದೆ.
ಗುತ್ತಿಗೆದಾರರ ಮನೆ ಮತ್ತು ಕಚೇರಿಗಳಲ್ಲಿ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಉದ್ಯಮಿ ಸೋಮಶೇಖರ್, ಗುತ್ತಿಗೆದಾರ ಉಪ್ಪಾರ್ ಸೇರಿದಂತೆ ಹಲವರ ಮನೆ, ಕಚೇರಿಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸದಾಶಿವನಗರದಲ್ಲಿರುವ ಉಪ್ಪಾರ್ ಕಚೇರಿ, ಬಸವೇಶ್ವರನಗರದ ಸೋಮಶೇಖರ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

4ನೇ ದಿನವೂ ಗುತ್ತಿಗೆದಾರ ಉಪ್ಪಾರ್ ಅವರ ಸದಾಶಿವನಗರದ ಕಚೇರಿಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಡರಾತ್ರಿವರೆಗೂ ತನಿಖೆ ನಡೆಸಿ ತೆರಳಿದ್ದ ಐಟಿ ಅಧಿಕಾರಿಗಳು, ಇಂದು ಮತ್ತೆ ಆಗಮಿಸಿ ಸಂಜೆವರೆಗೂ ದಾಖಲೆಗಳ ಲೆಕ್ಕಾಚಾರ ಮತ್ತು ಪರಿಶೀಲನೆ ನಡೆಸಿದ್ದಾರೆ.

ರಾಹುಲ್ ಎಂಟರ್ಪ್ರೈಸ್ ನಲ್ಲಿ ಶೋಧ ಅಂತ್ಯವಾಗಿದೆ. ಸತತ ಮೂರು ದಿನಗಳ ಕಾಲ ಐಟಿ ದಾಳಿ ನಡೆದಿತ್ತು. ಸಹಕಾರನಗರದ ರಾಹುಲ್ ಎಂಟರ್ಪ್ರೈಸಸ್ ಕಚೇರಿಯಲ್ಲಿ ನಿರಂತರ ಮೂರು ದಿನ ಕಡತಗಳ ಪರಿಶೀಲನೆ ನಡೆದಿತ್ತು. ಸಿಮೆಂಟ್ ಮತ್ತು ಸ್ಟೀಲ್ ಡೀಲ್ ಸಂಬಂಧಿತವಾಗಿ ಶೋಧ ನಡೆಸಲಾಗಿತ್ತು. ವಿವಿಧ ಕಾಂಟ್ರಾಕ್ಟರ್ ಗಳಿಗೆ ಸಂಬಂಧಿಸಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು. ರಾಹುಲ್ ಎಂಟರ್ ಪ್ರೈಸಸ್ ಹಲವು ಗುತ್ತಿಗೆದಾರರಿಗೆ ನಿರ್ಮಾಣ ಸಾಮಾಗ್ರಿಗಳನ್ನು ಪೂರೈಕೆ ಮಾಡಿತ್ತು. ಇದಕ್ಕೆ ಸಂಬಂಧಿಸಿ ಸತತ 60 ಗಂಟೆಗಳಿಗೂ ಹೆಚ್ಚಯ ಸಮಯ ದಾಳಿ ನಡೆಸಿದ್ದಾರೆ. ನಿನ್ನೆ ರಾತ್ರಿ ದಾಳಿ ಮುಕ್ತಾಯಗೊಳಿಸಿ ಐಟಿ ಅಧಿಕಾರಿಗಳು ನಿರ್ಗಮಿಸಿದ್ದಾರೆ.

Join Whatsapp
Exit mobile version