Home ಟಾಪ್ ಸುದ್ದಿಗಳು ಯಾವುದು ಧರ್ಮದ ಕಡ್ಡಾಯ ಪದ್ಧತಿ, ಯಾವುದು ಅಲ್ಲ ಎಂಬುವುದನ್ನು ಹೈಕೋರ್ಟ್ ವ್ಯಾಖ್ಯಾನಿಸುವುದು ಆಘಾತಕಾರಿ: ಲಬೀದ್...

ಯಾವುದು ಧರ್ಮದ ಕಡ್ಡಾಯ ಪದ್ಧತಿ, ಯಾವುದು ಅಲ್ಲ ಎಂಬುವುದನ್ನು ಹೈಕೋರ್ಟ್ ವ್ಯಾಖ್ಯಾನಿಸುವುದು ಆಘಾತಕಾರಿ: ಲಬೀದ್ ಶಾಫಿ

ಬೆಂಗಳೂರು: ಯಾವುದು ಧರ್ಮದ ಕಡ್ಡಾಯ ಪದ್ಧತಿ ಮತ್ತು ಯಾವುದು ಅಲ್ಲ ಎಂಬುವುದನ್ನು ಹೈಕೋರ್ಟ್  ವ್ಯಾಖ್ಯಾನಿಸುವುದು ಆಘಾತಕಾರಿಯಾಗಿದೆ. ಹಿಜಾಬ್ ಎಂಬುವುದು ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ. ಅದರಲ್ಲಿ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ. ವಾಸ್ತವದಲ್ಲಿ ಈ ತೀರ್ಪು ನ್ಯಾಯದ ನಿರಾಕರಣೆಯಾಗಿದೆ. ಇದು ಕೇವಲ ಧಾರ್ಮಿಕ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ ಮಕ್ಕಳ ಶೈಕ್ಷಣಿಕ ಹಕ್ಕಿನ ಉಲ್ಲಂಘನೆಯೂ ಆಗಿದೆ. ಶಿಕ್ಷಣಕ್ಕಿಂತ ಸಮ ವಸ್ತ್ರವೇ ಮುಖ್ಯ ಎಂಬ ಸಂದೇಶವನ್ನು ನ್ಯಾಯಾಲಯವು ನೀಡಿದೆ. ಮುಂದಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಮಕ್ಕಳ ಶೈಕ್ಷಣಿಕ ಹಕ್ಕನ್ನು ಎತ್ತಿ ಹಿಡಿಯಬಹುದೆಂದು ಆಶಿಸುತ್ತೇವೆ ಎಂದು ಸೋಲಿಡಾರಿಟಿ, ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಪ್ರತಿಕ್ರಿಯಿಸಿದ್ದಾರೆ.

ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ಮಂಗಳವಾರ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

Join Whatsapp
Exit mobile version