ಬೆಂಗಳೂರು: ಅನ್ಯ ಧರ್ಮದ ವಿಧ್ಯಾರ್ಥಿ ಗಳೊಂದಿಗೆ ಸೂರ್ಯ ನಮಸ್ಕಾರ ಮಾಡಿಸುವ ಸರ್ಕೂಲರ್ ಆದೇಶವನ್ನು ಸಂಪೂರ್ಣವಾಗಿ ಮುಸ್ಲಿಮ್ ಶಿಕ್ಷಕರು, ವಿಧ್ಯಾರ್ಥಿಗಳು ತಿರಸ್ಕರಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಒತ್ತಾಯಿಸಿದೆ.
ಈ ಕುರಿತು ಪತ್ರಿಕೆ ಪ್ರಕಟಣೆಯನ್ನು ಹೊರಡಿಸಿದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಇದು ಸಂವಿಧಾನ ನೀಡಿದ ಮೂಲಭೂತ ಹಕ್ಕು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ತಡೆಯುವುದಾಗಿದೆ.
ಸರಕಾರ ಹಿಂಬಾಗಿಲ ಮೂಲಕ ಇಂತಹ ಪದ್ದತಿ ಎಲ್ಲಾ ಧರ್ಮಗಳ ವಿಧ್ಯಾರ್ಥಿಗಳು ಜೊತೆಯಾಗಿ ಕಲಿಯುವ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ಮಾಡುವುದು ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನದ ನೇರ ಉಲ್ಲಂಘನೆ ಆಗಿದೆ. ಇದನ್ನು ಎಲ್ಲರೂ ಖಂಡಿಸಬೇಕಾಗಿದೆ ಎಂದು ತಿಳಿದ್ದಾರೆ.