Home ಟಾಪ್ ಸುದ್ದಿಗಳು ಗನ್ ಹಿಡಿಯುವುದು ನಮ್ಮ ಜನ್ಮ‌ಸಿದ್ಧ ಹಕ್ಕು, ಇವನ್ಯಾರು ಸಿದ್ದರಾಮಯ್ಯ ಕೇಳುವುದಕ್ಕೆ ?: ಬಿಜೆಪಿ ಶಾಸಕ ಬೋಪಯ್ಯ...

ಗನ್ ಹಿಡಿಯುವುದು ನಮ್ಮ ಜನ್ಮ‌ಸಿದ್ಧ ಹಕ್ಕು, ಇವನ್ಯಾರು ಸಿದ್ದರಾಮಯ್ಯ ಕೇಳುವುದಕ್ಕೆ ?: ಬಿಜೆಪಿ ಶಾಸಕ ಬೋಪಯ್ಯ !

ಕೊಡಗು: ಕೊಡಗಿನ ಪೊನ್ನಂಪೇಟೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಶೌರ್ಯ ಶಿಕ್ಷಣ ನೆಪದಲ್ಲಿ ಬಂದೂಕು ತರಬೇತಿಯನ್ನು ನೀಡುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಕಿಡಿಕಾರಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಜರಂಗದಳದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ತರಬೇತಿಯಲ್ಲಿ ಶಾಸಕ ಬೋಪಯ್ಯ ಭಾಗಿಯಾಗಿದ್ದರ ಕುರಿತು ಕಿಡಿಕಾರಿದ್ದ ಸಿದ್ದು, ಇವರ ನಿಷ್ಠೆ ಸಂವಿಧಾನಕ್ಕೋ ಬಜರಂಗದಳಕ್ಕೋ ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ಬಿಜೆಪಿ ಶಾಸಕ ಬೋಪಯ್ಯ, ಸಿದ್ದರಾಮಯ್ಯ ಅವರ ಚರಿತ್ರೆ ಎಲ್ಲರಿಗೂ ಗೊತ್ತಿದೆ, ಗನ್ ಹಿಡಿಯುವುದು ನಮ್ಮ ಜನ್ಮ‌ಸಿದ್ಧ ಹಕ್ಕು ಎಂದು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಅದನ್ನು ಪ್ರಶ್ನಿಸಲು ಇವನ್ಯಾರು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮತಾಂಧರ ಓಲೈಕೆಯನ್ನ ಬಂಡವಾಳ ಮಾಡಿಕೊಂಡು ಬಂದಿರುವ ನಿಮ್ಮಿಂದ ಸಂವಿಧಾನದ ಪಾಠವನ್ನು ನಾವು ಕಲಿಯಬೇಕಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ತನ್ನ ಆಡಳಿತದಲ್ಲಿ ಮುಸ್ಲಿಂ ಗೂಂಡಾಗಳ ಕೇಸ್ ಹಿಂಪಡೆದಿದ್ದಾರೆ. ಕೆಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ‌ ಮೇಲೆ ದಾಳಿ ಮಾಡಿದ್ದಾರೆ. ಪೊನ್ನಂಪೇಟೆ ಶಿಬಿರದಲ್ಲಿ ಏರ್‌ಗನ್ ತರಬೇತಿ ನೀಡಲಾಗಿದೆ,ಈ ತರಬೇತಿಗೆ ಯಾವುದೇ ಅನುಮತಿ ಬೇಕಾಗಿಲ್ಲ. ಸ್ವಯಂ ರಕ್ಷಣೆಗೆ ಬಂದೂಕು ತರಬೇತಿ ಅಗತ್ಯವಿದೆ ಎಂದು ಬೋಪಯ್ಯ ಹೇಳಿದ್ದಾರೆ.

ತ್ರಿಶೂಲ ಅಭ್ಯಾಸ ನಡೆಸಲು ಎಲ್ಲೂ ನಿರ್ಬಂಧವಿಲ್ಲ. SDPI ಬಗ್ಗೆ ನಾನು ಮಾತನಾಡಲ್ಲ, ಅವರ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ. ಎಸ್ಡಿಪಿಐ, ಪಿಎಫ್ಐ ದೇಶಕ್ಕೆ ಮಾರಕ, ಅವುಗಳನ್ನ ಬ್ಯಾನ್ ಮಾಡಬೇಕು ಎಂದರು..

Join Whatsapp
Exit mobile version