Home ಟಾಪ್ ಸುದ್ದಿಗಳು ಸಿ.ಡಿ.ಪ್ರಕರಣ | ಕೋರ್ಟ್ ಮೊರೆ ಹೋಗಿ ಮತ್ತಷ್ಟು ಗೊಂದಲ ಮಾಡಿಕೊಳ್ಳುವುದು ಸರಿಯಲ್ಲ : ಡಿವಿಎಸ್...

ಸಿ.ಡಿ.ಪ್ರಕರಣ | ಕೋರ್ಟ್ ಮೊರೆ ಹೋಗಿ ಮತ್ತಷ್ಟು ಗೊಂದಲ ಮಾಡಿಕೊಳ್ಳುವುದು ಸರಿಯಲ್ಲ : ಡಿವಿಎಸ್ ಅಸಮಾಧಾನ

ಸಿಡಿ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ನಾವು ಕೇಂದ್ರದ ವರಿಷ್ಠರ ಗಮನಕ್ಕೆ ತಂದ ಕಾರಣದಿಂದಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವಂತಾಯಿತು. ಈಗ ಹಲವು ಸಚಿವರು ಸಿ.ಡಿ.ವಿರುದ್ಧ ಕೋರ್ಟ್ ಮೆಟ್ಟಿಲೇರಿ ಮತ್ತಷ್ಟು ಗೊಂದಲ ಮಾಡಿಕೊಳ್ಳುವುದು ಸರಿಯಲ್ಲ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವ ಪಕ್ಷೀಯ ಸಚಿವರ ವಿರುದ್ಧವೇ ಹರಿಹಾಯ್ದ ಅವರು, ಇದು ನೈತಿಕತೆ ಪ್ರಶ್ನೆ, ಸಾರ್ವಜನಿಕ ಜೀವನದಲ್ಲಿ ಇರುವವರು ತುಂಬಾ ಎಚ್ಚರಿಕೆಯಿಂದ ಇರಬೇಕು, ಹಾಗಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೊಂದಲ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೆ ನೇರ ಆರೋಪ ಕೇಳಿಬಂದಿದೆ. ಪ್ರಕರಣದ ಪ್ರಮುಖ ಆರೋಪಿಯೇ ಮುಖ್ಯಮಂತ್ರಿಯ ಹೆಸರು ಹೇಳಿದ್ದಾರೆ. ಹಾಗಾಗಿ ಪಿಣರಾಯಿ ವಿಜಯನ್ ಇದನ್ನು ಚುನಾವಣೆ ಷಡ್ಯಂತ್ರ ಎನ್ನಬಹುದು. ಆದರೂ ಈಗ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸೂಕ್ತ ಎಂದು ಗೌಡ ಒತ್ತಾಯಿಸಿದ್ದಾರೆ.

Join Whatsapp
Exit mobile version