ನವದೆಹಲಿ: ಯುವತಿಯರು ಮದುವೆಯಾಗಲೆಂದೇ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದು ಸರಿಯಲ್ಲ. ತಾಯಂದಿರು ಮಕ್ಕಳಿಗೆ ಹಿಂದೂ ಧರ್ಮದ ಪರಂಪರೆ ಮತ್ತು ಉದಾತ್ತತೆಯನ್ನು ಬಾಲ್ಯದಿಂದಲೇ ಕಲಿಸುತ್ತಿಲ್ಲ. ಹೀಗಾಗಿ ಚಿಕ್ಕ ಪುಟ್ಟ ಸ್ವಹಿತದ ಕಾರಣಗಳಿಗಾಗಿ ಮತಾಂತರ ನಡೆಯುತ್ತಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮತಾಂತರ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿರುವ ಅವರು, ಹಿಂದೂ ಹುಡುಗಿಯರು ಮತ್ತು ಹುಡುಗರು ಇತರ ಧರ್ಮವನ್ನು ಏಕೆ ಸ್ವೀಕರಿಸುತ್ತಾರೆ. ಮದುವೆಯೆಂಬ ಸಣ್ಣ ಸ್ವಾರ್ಥಕ್ಕಾಗಿ. ನಾವು ಮಕ್ಕಳಿಗೆ ಮನೆಯಲ್ಲಿ ನಮ್ಮ ಧರ್ಮದ ಮೌಲ್ಯಗಳನ್ನು ಕಲಿಸಬೇಕಾಗಿದೆ. ನಮ್ಮ ಸ್ವಭಾವ, ನಮ್ಮ ಧರ್ಮ ಮತ್ತು ನಮ್ಮ ಪ್ರಾರ್ಥನಾ ಸಂಪ್ರದಾಯಗಳಲ್ಲಿ ಗೌರವವನ್ನು ಬೆಳೆಸಬೇಕಿದೆ ಎಂದು ಹೇಳಿದ್ದಾರೆ.