Home ಟಾಪ್ ಸುದ್ದಿಗಳು ವಾಹನದ ಹಿಂದಿನ ಆಸನದಲ್ಲಿರುವವರೂ ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯ: ಸಾರಿಗೆ ಸಚಿವಾಲಯ

ವಾಹನದ ಹಿಂದಿನ ಆಸನದಲ್ಲಿರುವವರೂ ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯ: ಸಾರಿಗೆ ಸಚಿವಾಲಯ

ನವದೆಹಲಿ: ಕಾರು ತಯಾರಕರು ಅಲಾರಾಂ ಪದ್ಧತಿ ಹೊಂದಿಸುವುದು ಮತ್ತು ಹಿಂದಿನ ಸೀಟಿನವರಿಗೂ ಸೀಟ್ ಬೆಲ್ಟ್ ಅಳವಡಿಸಿರುವುದು ಕಡ್ಡಾಯ ಎಂದು ರಸ್ತೆ ಸಾರಿಗೆ ಸಚಿವಾಲಯವು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಂತೆ ಕರಡು ಪ್ರತಿಗೆ ಜನರು ತಮ್ಮ ಅಭಿಪ್ರಾಯ ತಿಳಿಸಲು ಅಕ್ಟೋಬರ್ 5 ಕೊನೆಯ ದಿನವಾಗಿದೆ.

ಭಾರತದ ಹೆಸರಾಂತ ಉದ್ದಿಮೆ ಟಾಟಾದ ಮಾಜಿ ಚೇರ್ಮನ್ ಸೈರುಸ್ ಮಿಸ್ತ್ರಿಯವರು ಕಾರು ಅಪಘಾತದಲ್ಲಿ ಮರಣ ಹೊಂದಿದ ನಂತರ ಹಿಂದಿನ ಸೀಟಿನವರಿಗೂ ಸೀಟ್ ಬೆಲ್ಟ್ ಕಡ್ಡಾಯ ಎಂಬುದನ್ನು ರಸ್ತೆ ಸಚಿವಾಲಯವು ಒತ್ತಿ ಹೇಳಿದೆ. ಮಿಸ್ತ್ರಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು ಮತ್ತು ಅವರಿಗೆ ಸೀಟ್ ಬೆಲ್ಟ್ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು, ಪೋಲೀಸರು ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಕಳೆದ ವರುಷ ವಿಶ್ವ ಬ್ಯಾಂಕ್ ಹೇಳಿತ್ತು.

ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾದ ಭಾರತದಲ್ಲಿ ವಾಹನದ ಎಲ್ಲ ಸೀಟುಗಳಲ್ಲೂ  ಸೀಟು ಬೆಲ್ಟ್ ಇರಬೇಕು ಮತ್ತು ಅದನ್ನು ಪ್ರಯಾಣಿಕರು ಕಟ್ಟಿಕೊಳ್ಳಬೇಕು ಎನ್ನುವುದು ಈಗಾಗಲೇ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ ದಂಡ ಕೂಡ ಕಡ್ಡಾಯವಾಗಿ ಹಾಕಲಾಗುತ್ತದೆ. ಆದರೆ ಇಲ್ಲಿಯವರೆಗೆ ಅದು ಅಷ್ಟಾಗಿ ಜಾರಿಗೆ ಬಂದಿಲ್ಲ. ಈಗ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

Join Whatsapp
Exit mobile version