Home ಟಾಪ್ ಸುದ್ದಿಗಳು ವೈದ್ಯರು ಆ್ಯಂಟಿಬಯೋಟಿಕ್ಸ್ ಶಿಫಾರಸು ಮಾಡುವಾಗ ಕಾರಣ ಬರೆಯುವುದು ಕಡ್ಡಾಯ: ಕೇಂದ್ರ ಸರ್ಕಾರ

ವೈದ್ಯರು ಆ್ಯಂಟಿಬಯೋಟಿಕ್ಸ್ ಶಿಫಾರಸು ಮಾಡುವಾಗ ಕಾರಣ ಬರೆಯುವುದು ಕಡ್ಡಾಯ: ಕೇಂದ್ರ ಸರ್ಕಾರ

ನವದೆಹಲಿ: ಇನ್ನು ಮುಂದೆ ವೈದ್ಯರು ಮತ್ತು ಎಲ್ಲಾ ಫಾರ್ಮಾಸಿಸ್ಟ್ ಗಳು ಆ್ಯಂಟಿಬಯೋಟಿಕ್ಸ್ ಶಿಫಾರಸು ಮಾಡುವಾಗ ತಮ್ಮ ಪ್ರಿಸ್ಕ್ರಿಪ್ಷನ್ ಗಳ ಮೇಲೆ ನಿಖರವಾದ ಕಾರಣಗಳನ್ನು ಬರೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.


ದೇಶದಲ್ಲಿ ಆ್ಯಂಟಿಬಯೋಟಿಕ್ಸ್/ ಆ್ಯಂಟಿಮೈಕ್ರೊಬಿಯಲ್ ಔಷಧಿಗಳ ದುರುಪಯೋಗ ತಡೆಯುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ.

ಅರ್ಹ ವೈದ್ಯರು ಪ್ರಿಸ್ಕ್ರಿಪ್ಷನ್ ನೀಡಿರೆ ಮಾತ್ರ ಆ್ಯಂಟಿಬಯೋಟಿಕ್ ವಿತರಿಸುವಂತೆ ದೇಶದ ಎಲ್ಲಾ ಫಾರ್ಮಾಸಿಸ್ಟ್ ಅಸೋಸಿಯೇಷನ್ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ(ಡಿಜಿಎಚ್ಎಸ್) ಆ್ಯಂಟಿಬಯೋಟಿಕ್ಸ್ ದುರುಪಯೋಗ ತಡೆಯಲು ಈ ಕುರಿತು ಕಾಲೇಜು ವೈದ್ಯರು, ವೈದ್ಯಕೀಯ ಸಂಘಗಳು ಮತ್ತು ಫಾರ್ಮಾಸಿಸ್ಟ್ ಸಂಘಗಳಿಗೆ ಕೇಂದ್ರ ಪತ್ರ ಬರೆದಿದೆ.

Join Whatsapp
Exit mobile version