ಮೈಸೂರು: ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ ಏನಿದು ಅನ್ಯಾಯ ನಿಮ್ಮ ನೇತೃತ್ವದ ಸರ್ಕಾರದಿಂದ? ಮೈಸೂರು ನಗರದಲ್ಲಿ ಬರ್ಬರವಾಗಿ ಕೊಲೆಯಾದ ಧಾರ್ಮಿಕ ಗುರು ಮೌಲಾನಾ ಅಕ್ಮಲ್ ರವರ ಎಲ್ಲಾ ಕೊಲೆ ಆರೋಪಿಗಳನ್ನು ಇನ್ನೂ ಬಂಧಿಸಲಾಗದ ನಿಮ್ಮ ಪೊಲೀಸ್ ಇಲಾಖೆ, ಮೌಲಾನರ ಕುಟುಂಬದ 15 ಸದಸ್ಯರ ಮೇಲೆಯೇ 107 ಕೇಸು ದಾಖಲಿಸಿರುವುದು ಖಂಡನೀಯ, ತಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿರುವ, ಆ ಕುಟುಂಬದ ಮೇಲೆಯೇ ಕೇಸು ದಾಖಲಿಸಿ ಏನನ್ನು ಸಾಧಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.