ಸುಗಂಧ ದ್ರವ್ಯ ವ್ಯಾಪಾರಿಯ ಮನೆಗೆ ಐಟಿ ದಾಳಿ| ₹ 150 ಕೋಟಿಗೂ ಅಧಿಕ ನಗದು ಪತ್ತೆ

Prasthutha|

ಐಟಿ ಅಧಿಕಾರಿಗಳಿಂದ ಮುಂದುವರಿದ ಎಣಿಕೆ ಕಾರ್ಯ

- Advertisement -

ಕಾನ್ಪುರ: ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದು, ಇದುವರೆಗೆ ₹150 ಕೋಟಿಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. ಐಟಿ ಅಧಿಕಾರಿಗಳು ಎಣಿಕೆ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ದಾಳಿಯ ಸಮಯದಲ್ಲಿ ತೆಗೆಯಲಾಗಿರುವ ಚಿತ್ರಗಳು ವೈರಲ್ ಆಗಿದ್ದು, ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ಹಣವನ್ನು ತುಂಬಿರುವುದು ಇದರಲ್ಲಿ ಕಾಣುತ್ತದೆ. ಎಲ್ಲಾ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ. ಫೋಟೋದಲ್ಲಿ 30 ಕ್ಕೂ ಹೆಚ್ಚು ಕಟ್ಟುಗಳು ಗೋಚರಿಸುತ್ತವೆ.

- Advertisement -

ಮತ್ತೊಂದು ಚಿತ್ರದಲ್ಲಿ ಐಟಿ ಮತ್ತು ಜಿಎಸ್‌ಟಿ ಅಧಿಕಾರಿಗಳು ಕೋಣೆಯ ಮಧ್ಯದಲ್ಲಿ ಹಣದ ರಾಶಿಗಳ ಸುತ್ತ ಕೂತಿದ್ದು, ಮೂರು ನೋಟು ಎಣಿಸುವ ಯಂತ್ರಗಳ ಕೂಡಾ ಇದೆ. ವಶಪಡಿಸಿಕೊಂಡ ಒಟ್ಟು ಹಣದ ಮೊತ್ತವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ.

ತಲಾ 50,000 ರೂ.ಗಳ 200 ಕ್ಕೂ ಹೆಚ್ಚು ರಶೀದಿಗಳನ್ನು ಜಿಎಸ್‌ಟಿ ಪಾವತಿಗಳಿಲ್ಲದೆ ರಚಿಸಲಾಗಿದ್ದು, ಇದು ವ್ಯಾಪಾರಿಯ ಗೋದಾಮಿನೊಳಗೆ ನಾಲ್ಕು ಟ್ರಕ್‌ಗಳಲ್ಲಿ ಕಂಡುಬಂದಿವೆ. ಎಲ್ಲಾ ನಾಲ್ಕು ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

Join Whatsapp