Home ಟಾಪ್ ಸುದ್ದಿಗಳು ಬೀದಿನಾಯಿಗಳ ಹಾವಳಿ ತಡೆಗೆ ಶ್ವಾನಗಳ ಕೊರಳಿಗೆ QR ಕೋಡ್​ ಟ್ಯಾಗ್​

ಬೀದಿನಾಯಿಗಳ ಹಾವಳಿ ತಡೆಗೆ ಶ್ವಾನಗಳ ಕೊರಳಿಗೆ QR ಕೋಡ್​ ಟ್ಯಾಗ್​

ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಪಶುವೈದ್ಯರು ಮಾರ್ಗ ಕಂಡು ಹಿಡಿದಿದ್ದಾರೆ. ನಗರದಲ್ಲಿನ ಬೀದಿನಾಯಿಗಳ ಕೊರಳಿಗೆ ಮೊದಲ ಬಾರಿಗೆ ಕ್ಯೂಆರ್ ಕೋಡ್ ಹೊಂದಿರುವ ಜಿಯೋಟ್ಯಾಗ್​​​ಗಳನ್ನು ಹಾಕಲಾಗಿದೆ.

ಬೀದಿನಾಯಿಗಳ ಸಂಖ್ಯೆ ಮೇಲೆ ನಿಗಾ ಇಡಲು ಸಾರ್ವಜನಿಕರಿಗೆ, ಪಶುವೈದ್ಯರು ಮತ್ತು ನೋಂದಾಯಿತ ಸ್ವಯಂಸೇವಕರಿಗೆ ಇದರಿಂದ ಅನುಕೂಲವಾಗಲಿದೆ. ಈ ಕ್ಯೂಆರ್​ ಕೋಡ್​​ ಅನ್ನು ಸ್ಯ್ಕಾನ್​​​​​​ ಮಾಡುವ ಮೂಲಕ ಯಾವ ತಳಿ ನಾಯಿ, ಅದಕ್ಕೆ ವ್ಯಾಕ್ಸಿನೇಷನ್ ಆಗಿದೆಯಾ? ಅದರ ಆರೋಗ್ಯ ಸ್ಥಿತಿ ಮತ್ತು ಆ ಶ್ವಾನವನ್ನು ಆರೈಕೆ ಮಾಡುತ್ತಿದ್ದವರ ಸಂಪರ್ಕ ಸಂಖ್ಯೆಯೂ ತಿಳಿದುಕೊಳ್ಳಬಹುದಾಗಿದೆ.

ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು ಅಧಿಕಾರಿಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯ ಪಶುಸಂಗೋಪನೆ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯ ಆರಂಭವಾಗಿದೆ.

ಪಶುವೈದ್ಯಕೀಯ ಕಾಲೇಜಿನ ಪಶುವೈದ್ಯರು ಪ್ರಾಯೋಗಿಕವಾಗಿ ಶನಿವಾರ ಜಾಕಿ ಮತ್ತು ಪಿಂಕಿ ಎಂಬ ಹೆಸರಿನ ಎರಡು ಬೀದಿನಾಯಿಗಳಿಗೆ QR ಕೋಡ್ ಸ್ಕ್ಯಾನರ್​ಗಳನ್ನು ಅಳವಡಿಸಿದ್ದಾರೆ. ಜಿಯೋಟ್ಯಾಗ್ QR ಕೋಡ್ ಸ್ಕ್ಯಾನರ್​ ಅನ್ನು ದೂರದಿಂದ ಮೊಬೈಲ್ ಅಥವಾ ವಿಶೇಷ ಸ್ಕ್ಯಾನಿಂಗ್ ಕ್ಯಾಮೆರಾಗಳ ಮೂಲಕ ಸ್ಕ್ಯಾನ್ ಮಾಡಬಹುದಾಗಿದೆ.

ಮುಂಬೈನಲ್ಲಿ 1,500 ಕ್ಕೂ ಹೆಚ್ಚು ಬೀದಿಬದಿಗಳಿಗೆ ಜಿಯೋಟ್ಯಾಗ್ ಹಾಕಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೇ ಮಾದರಿಯನ್ನು ಬೆಂಗಳೂರಿನ ಬೀದಿ ನಾಯಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಮನುಷ್ಯರಂತೆ ಬೀದಿನಾಯಿಗಳು ಸಹ ತಮ್ಮ ವಿಶಿಷ್ಟ ಗುರುತಿನ ಚೀಟಿಗಳನ್ನು ಹೊಂದಿದ್ದು, ನಾಯಿಯ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ 24×7 ಪಡೆದುಕೊಳ್ಳಬಹುದಾಗಿದೆ. ಎರಡು ತಿಂಗಳ ಹಿಂದೆ ‘pawfriend.in’ ಎಂಬ ಕಾರ್ಯಕ್ರಮದ ಮೂಲಕ ಮುಂಬೈ ಮಹಾನಗರ ಪಾಲಿಕೆ (BMC)ಗೆ ಟೆಕ್ಕಿ ಅಕ್ಷಯ್ ರಿಡ್ಲಾನ್ ಅವರು ಟ್ಯಾಗ್‌ ತಯಾರು ಮಾಡಿಕೊಟ್ಟಿದ್ದಾರೆ ಎಂದು ಹೆಬ್ಬಾಳದ ಪಶುಸಂಗೋಪನಾ ಇಲಾಖೆಯ ಮೊಬೈಲ್ ಮತ್ತು ವಿಸ್ತರಣಾ ವಿಭಾಗದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪ್ರಯಾಗ್ ಎಚ್‌ಎಸ್ ಹೇಳಿದರು.

ಕ್ಯೂಆರ್​ ಕೂಡ್​ ಮೂಲಕ ಬೀದಿನಾಯಿಗಳ ದಾಳಿಯಿಂದ ಒಳಗಾದವರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳಿಗೆ ಸಾಧ್ಯವಾಗುತ್ತದೆ. ಅಲ್ಲದೆ ಪ್ರಾಣಿಗಳ ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಫೀಡರ್ ವಿವರಗಳ ಬಗ್ಗೆ ನಮಗೆ ಪ್ರಮುಖ ಮಾಹಿತಿಯನ್ನು ನೀಡುತ್ತದೆ. ಇವೆಲ್ಲವನ್ನೂ ಸುರಕ್ಷಿತವಾದ ಡೇಟಾಬೇಸ್‌ನಲ್ಲಿ ಸಂರಕ್ಷಿಸಲಾಗುವುದು. ಪ್ರಸ್ತುತ, ಪಶುವೈದ್ಯರು ಯೋಜನೆಗೆ ಪ್ರಾಣಿ ಪ್ರಿಯರಿಂದ ಹಣ ಸಂಗ್ರಹಿಸಿದ್ದಾರೆ. ಇದರ ಫಲಿತಾಂಶದ ಆಧಾರದ ಮೇಲೆ ನಗರದಾದ್ಯಂತ ಅಭಿಯಾನ ನಡೆಯಲಿದೆ.

Join Whatsapp
Exit mobile version