Home ಟಾಪ್ ಸುದ್ದಿಗಳು ‘ಇಂದಿನ ಡೀಲ್’ ಎಂಬ ಶೀರ್ಷಿಕೆಯೊಂದಿಗೆ ಮುಸ್ಲಿಮ್ ಯುವತಿಯರ ಚಿತ್ರ| ದೆಹಲಿ ಮಹಿಳಾ ಆಯೋಗದಿಂದ ಪೊಲೀಸರಿಗೆ ನೋಟಿಸ್

‘ಇಂದಿನ ಡೀಲ್’ ಎಂಬ ಶೀರ್ಷಿಕೆಯೊಂದಿಗೆ ಮುಸ್ಲಿಮ್ ಯುವತಿಯರ ಚಿತ್ರ| ದೆಹಲಿ ಮಹಿಳಾ ಆಯೋಗದಿಂದ ಪೊಲೀಸರಿಗೆ ನೋಟಿಸ್

ಹೊಸದಿಲ್ಲಿ: ಮುಸ್ಲಿಮ್ ಯುವತಿಯರ ಚಿತ್ರಗಳನ್ನು ಸಂಘಪರಿವಾರದ ಕಾರ್ಯಕರ್ತರು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ನೀಡಿದೆ.

ಹಿಂದುತ್ವ ಪ್ರೊಫೈಲ್‌ಗಳು ‘ಇಂದಿನ ಡೀಲ್’ ಎಂಬ ಶೀರ್ಷಿಕೆಯೊಂದಿಗೆ ಮುಸ್ಲಿಮ್ ಯುವತಿಯರ ಚಿತ್ರಗಳನ್ನು ಹಂಚಿಕೊಂಡಿತ್ತು. ಜುಲೈ 4 ರಂದು ಸಂಘಪರಿವಾರದ ಕಾರ್ಯಕರ್ತರು ನೂರಾರು ಮುಸ್ಲಿಮ್ ಯುವತಿಯರ ಚಿತ್ರಗಳನ್ನು ಗಿಟ್‌ಹಬ್ ಮೂಲಕ ಪ್ರಸಾರ ಮಾಡಿದ್ದರು. ‘ಇಂದಿನ ಡೀಲ್’ ಶೀರ್ಷಿಕೆಯೊಂದಿಗೆ ಅನೇಕ ಜನರು ಟ್ವಿಟ್ಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ಗಿಟ್‌ಹಬ್ ಚಿತ್ರಗಳನ್ನು ತೆಗೆದುಹಾಕಿತ್ತು.

ಈ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ಪ್ರತಿ ಮತ್ತು ಆರೋಪಿಗಳನ್ನು ಬಂಧಿಸಿರುವ ವಿವರಗಳನ್ನು ಒದಗಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪೊಲೀಸರಿಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ವಿವರಗಳನ್ನು ಒದಗಿಸಲು ಪೊಲೀಸರಿಗೆ ಒಂದು ವಾರದ ಸಮಯವನ್ನು ಮಲಿವಾಲ್ ನೀಡಿದ್ದಾರೆ.

ಈ ಹಿಂದೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಪತ್ರಕರ್ತರು ಮತ್ತು ಇತರ ವೃತ್ತಿಪರರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.

Join Whatsapp
Exit mobile version