ಬೆಂಗಳೂರು: ಭಾರತದಲ್ಲಿ ರಾಕೇಟ್ ಉಡಾವಣೆಗಳ ಸಮಯದ ‘ಕೌಂಟ್ಡೌನ್’ಗೆ ಧ್ವನಿಯಾಗಿದ್ದ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎನ್ ವಲರ್ಮತಿ ನಿಧನರಾಗಿದ್ದಾರೆ.
ತಮಿಳುನಾಡಿನ ಅರಿಯಲೂರು ಮೂಲದ ವಲರ್ಮತಿ ಅವರು ಶನಿವಾರ ಸಂಜೆ ಹೃದಯಾಘಾತದಿಂದ ಚೆನ್ನೈನಲ್ಲಿ ಸಾವನ್ನಪ್ಪಿದ್ದಾರೆ. ಜುಲೈ 14ರಂದು ಉಡಾವಣೆಯಾದ ಯಶಸ್ವಿ ಚಂದ್ರಯಾನ-3 ಅವರ ಕಡೆಯ ಸಂತಸದ ಕ್ಷಣ ಮತ್ತು ಸಾಧನೆಯಾಗಿದೆ.
ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್, “ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳ ಕ್ಷಣಗಣನೆಗಳಿಗೆ ವಲರ್ಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ -3 ಅವರ ಅಂತಿಮ ಕ್ಷಣಗಣನೆ ಪ್ರಕಟಣೆಯಾಗಿತ್ತು. ಅನಿರೀಕ್ಷಿತ ಅಗಲಿಕೆಯಿಂದ ದುಃಖವಾಗುತ್ತಿದೆ. ಪ್ರಣಾಮಗಳು!” ಎಂದು ಟ್ವೀಟ್ ಮಾಡಿದ್ದಾರೆ.