ಟೆಹ್ರಾನ್: ಇಸ್ರೇಲ್ನ ರಾಯಭಾರ ಕಚೇರಿಗಳು ಇನ್ನುಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ನ ಪರಮೋಚ್ಛ ನಾಯಕ ಅಯತುಲ್ಲಾ ಅಲಿ ಖಮೇನಿ ಅವರ ಹಿರಿಯ ಸಲಹೆಗಾರ ಯಾಹ್ಯಾ ರಹೀಂ ಸಫಾವಿ ಈ ಎಚ್ಚರಿಕೆ ನೀಡಿದ್ದಾರೆ.
ದಾಳಿ ನಡೆಸುವುದಕ್ಕೆ ನಮ್ಮ ಪಡೆಗಳು ಸಿದ್ಧವಾಗಿವೆ. ಅವು ಹೇಗಿರುತ್ತವೆ ಎಂಬುದನ್ನು ನೀವು ಕಾದು ನೋಡಬೇಕು. ಕ್ರೂರ ಇಸ್ರೇಲ್ ದೇಶವನ್ನು ಎದುರಿಸುವುದು ಶಾಸನಬದ್ಧ ಮತ್ತು ನ್ಯಾಯಸಮ್ಮತ ಹಕ್ಕಾಗಿದೆ. ನಮ್ಮ ಸುತ್ತಮುತ್ತಲ ಪ್ರಾಂತ್ಯಗಳ ಇಸ್ರೇಲ್ ರಾಯಭಾರ ಕಚೇರಿಗಳನ್ನು ಪ್ರಸ್ತುತ ಮುಚ್ಚಲಾಗಿದೆ’ ಎಂದು ಯಾಹ್ಯಾ ತಿಳಿಸಿದ್ದಾರೆ.
ಡಮಾಸ್ಕಸ್ನ ನಮ್ಮ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ನಡೆಸಿ, ಕಾನ್ಸುಲರ್ ಅನೆಕ್ಸ್ಅನ್ನು ನೆಲಸಮಗೊಳಿಸಿದೆ ಎಂದು ಇರಾನ್ ಆರೋಪಿಸಿದೆ.