Home ಟಾಪ್ ಸುದ್ದಿಗಳು 17 ವರ್ಷದ ಫೆಲೆಸ್ತೀನ್ ಬಾಲಕನನ್ನು ಕೊಂದು ಹಾಕಿದ ಇಸ್ರೇಲ್ ಪಡೆ

17 ವರ್ಷದ ಫೆಲೆಸ್ತೀನ್ ಬಾಲಕನನ್ನು ಕೊಂದು ಹಾಕಿದ ಇಸ್ರೇಲ್ ಪಡೆ

ಗಾಝಾಪಟ್ಟಿ: ಉತ್ತರ ವೆಸ್ಟ್ ಬ್ಯಾಂಕ್ ನಗರದ ಜೆನಿನ್ ಬಳಿ ಇಸ್ರೇಲ್ ಸೇನೆ ದಾಳಿ ನಡೆಸಿ 17 ವರ್ಷದ ಫೆಲೆಸ್ತೀನ್ ಬಾಲಕ ಓಡೈ ಟ್ರಾಡ್ ಸಲಾಹ್ ನನ್ನು ಕೊಂದು ಹಾಕಿದೆ.

ಜೆನಿನ್ ಪಶ್ಚಿಮ ಹೊರವಲಯದಲ್ಲಿರುವ ಕುಫ್ರ್ ಡಾನ್ ಗ್ರಾಮದಲ್ಲಿ ಇಸ್ರೇಲ್ ಸೇನೆ ಆತನ ತಲೆಗೆ ಗುಂಡು ಹಾರಿಸಿದೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ಸೇನೆಯು ಮುಂಜಾನೆ ಕುಫ್ರ್ ದಾನ್ ಮೇಲೆ ದಾಳಿ ನಡೆಸಿದ ಬಳಿಕ ಕನಿಷ್ಠ ಮೂವರು ಫೆಲೆಸ್ತೀನ್ ನಾಗರಿಕರು ಗಾಯಗೊಂಡಿದ್ದು, ಆ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಲಾಹ್ ತಂದೆ ಟ್ರಾಡ್, ಯಾವುದೇ ಕಾರಣಗಳಿಲ್ಲದೆ ನನ್ನ ಮಗನನ್ನು ಇಸ್ರೇಲ್ ಸೇನೆ ಕೊಂದು ಹಾಕಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version