Home ಟಾಪ್ ಸುದ್ದಿಗಳು ಆರ್.ಎಸ್.ಎಸ್ ನ ವಿಜಯ ದಶಮಿ ಕಾರ್ಯಕ್ರಮದಲ್ಲಿ ಇಸ್ರೇಲ್ ರಾಯಭಾರಿ

ಆರ್.ಎಸ್.ಎಸ್ ನ ವಿಜಯ ದಶಮಿ ಕಾರ್ಯಕ್ರಮದಲ್ಲಿ ಇಸ್ರೇಲ್ ರಾಯಭಾರಿ

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಶುಕ್ರವಾರ ಆಯೋಜಿಸಿದ್ದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಇಸ್ರೇಲ್ ರಾಜತಾಂತ್ರಿಕ ಕೊಬ್ಬಿ ಶೋಷನಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.


ಇಸ್ರೇಲ್ ನ ಕಾನ್ಸುಲೇಟ್ ಜನರಲ್ ಆಗಿ ಮುಂಬೈನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಬ್ಬಿ ಶೋಷನಿ ಅವರು ವಿಜಯ ದಶಮಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೆಸ್ಸೆಸ್ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು. ಈ ಹಿಂದೆ ಆರ್.ಎಸ್.ಎಸ್ ಮುಖ್ಯಸ್ಥ ನಾಗ್ಪುರದ ಪ್ರಧಾನ ಕಚೇರಿಯಲ್ಲಿ ಶಾಸ್ತ್ರ ಪೂಜೆ ನೆರವೇರಿಸಿದ್ದರು.


ಸುಮಾರು ಎರಡು ದಶಕಗಳಿಂದ ಇಸ್ರೇಲ್ ಭಾರತಕ್ಕೆ ಅಗ್ರ ನಾಲ್ಕು ಶಸ್ತ್ರಾಸ್ತ್ರ ಪೂರೈಕೆದಾರರಲ್ಲಿ ಒಂದಾಗಿದೆ. ಪ್ರತಿ ವರ್ಷ 1 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಮಿಲಿಟರಿ ಸಾಮಾಗ್ರಿಗಳನ್ನು ಮಾರಾಟ ನಡೆಸುತ್ತದೆ

Join Whatsapp
Exit mobile version