ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನೊಂದಿಗೆ ಯಹೂದಿ ರಾಷ್ಟ್ರ ಇಸ್ರೇಲ್ ಸರ್ಕಾರ ಮುಕ್ತ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದೆ. ದುಬೈಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಇಸ್ರೇಲ್’ನ ಹಣಕಾಸು ಮತ್ತು ಕೈಗಾರಿಕ ಸಚಿವರು ಈ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ.
ಇಸ್ರೇಲ್, ಫೆಲೆಸ್ತೀನ್ ಮಧ್ಯೆ ನಡೆಯುತ್ತಿರುವ ಸಂಘರ್ಷದ ನಡುವೆ ಈ ಒಡಂಬಡಿಕೆ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ಸದ್ಯ ನೂತನ ಒಪ್ಪಂದದನ್ವಯ ತೆರಿಗೆ, ಆಮದು ಮತ್ತು ಬೌದ್ಧಿಕ ಆಸ್ತಿಗಳ ಬಗ್ಗೆ ಸಹಕಾರದ ಭರವಸೆಯನ್ನು ನೀಡಿದೆ ಎಂದು ಇಸ್ರೇಲ್ ನಿಯೋಗ ತಿಳಿಸಿದೆ. ಇದರೊಂದಿಗೆ ಭವಿಷ್ಯದಲ್ಲಿ ದುಬೈಯನ್ನು ಕೇಂದ್ರೀಕರಿಸಿ ಇಸ್ರೇಲ್’ನ ಹಲವು ಕಂಪೆನಿಗಳ ಕಾರ್ಯಾಚರಿಸಲಿದೆ ಎಂದು ಹೇಳಲಾಗಿದೆ.
ಪ್ರಸಕ್ತ ಸಾಲಿನ ಕೊನೆಯಲ್ಲಿ ಸುಮಾರು ಒಂದು ಸಾವಿರ ಇಸ್ರೇಲ್ ಮೂಲದ ಕಂಪೆನಿಗಳು ಯುಎಇಯಲ್ಲಿ ಕಾರ್ಯ ಆರಂಭಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.