Home ಟಾಪ್ ಸುದ್ದಿಗಳು ಗಾಝಾದಲ್ಲಿ ಕೆಲವು ನಿಯಮಗಳ ಸಡಿಲಗೊಳಿಸಿದ ಇಸ್ರೇಲ್‌

ಗಾಝಾದಲ್ಲಿ ಕೆಲವು ನಿಯಮಗಳ ಸಡಿಲಗೊಳಿಸಿದ ಇಸ್ರೇಲ್‌

ಜೆರುಸಲೇಂ : ಗಾಝಾ ಪಟ್ಟಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಇಸ್ರೇಲ್‌ ಕೊಂಚ ಸಡಿಲಿಕೆ ಮಾಡಿದೆ. ಗುರುವಾರ ಈ ಬಗ್ಗೆ ಇಸ್ರೇಲ್‌ ಘೋಷಣೆ ಮಾಡಿದೆ. ಗಾಝಾ ಪಟ್ಟಿಯ ಮೀನುಗಾರಿಕಾ ವಲಯವನ್ನು ವಿಸ್ತರಿಸುವುದಾಗಿ ಮತ್ತು ಕೈಗಾರಿಕೆಗಳಿಗೆ ಕೆಲವೊಂದು ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಅನುಮತಿ ನೀಡಿರುವುದಾಗಿ ಇಸ್ರೇಲ್‌ ಘೋಷಿಸಿದೆ.

ಮೀನುಗಾರಿಕೆ ವಲಯವನ್ನು ೧೧  ಕಿ.ಮೀ.ನಿಂದ ೧೬.೭ ಕಿ.ಮೀ. ವರೆಗೆ ವಿಸ್ತರಿಸಲಾಗಿದೆ ಎಂದು ಫೆಲೆಸ್ತೀನಿಯನ್ನರಿಗೆ ಸಂಬಂಧಿಸಿದ ಇಸ್ರೇಲ್‌ ನ ಸೇನಾ ಘಟಕ ಭೂವ್ಯಾಪ್ತಿಯ ಸರಕಾರಿ ಚಟುವಟಿಕೆಗಳ ಸಂಯೋಜನಾಧಿಕಾರಿ ತಿಳಿಸಿದ್ದಾರೆ.

ಕೆಲವು ಸರಕಾರಿ ಫ್ಯಾಕ್ಟರಿಗಳಿಗೆ ಕರೀಂ ಶಲೋಂ ಕ್ರಾಸಿಂಗ್‌ ಮೂಲಕ ಇಸ್ರೇಲ್‌ ನಿಂದ ಗಾಝಾಗೆ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು ಅನುಮತಿಸಲಾಗಿದೆ. ಶುಕ್ರವಾರದಿಂದ ಈ ವಿನಾಯ್ತಿ ಚಾಲ್ತಿಗೆ ಬರಲಿವೆ ಎಂದು ವರದಿಗಳು ತಿಳಿಸಿವೆ.

ಪ್ರಕ್ಷುಬ್ಧವಾಗಿದ್ದ ಈ ಪ್ರಾಂತ್ಯದಲ್ಲಿ ಕೆಲವು ದಿನಗಳ ಬಳಿಕ ನಿಯಮಗಳನ್ನು ಸಡಿಲಗೊಳಿಸಲಾಗಿದೆ.   

Join Whatsapp
Exit mobile version