Home ಟಾಪ್ ಸುದ್ದಿಗಳು ಇಸ್ರೇಲ್ ದಾಳಿ: ಹಿಝ್ಬುಲ್ಲಾ ಹಿರಿಯ ಕಮಾಂಡರ್ ಸಹಿತ ಐವರು ಮೃತ

ಇಸ್ರೇಲ್ ದಾಳಿ: ಹಿಝ್ಬುಲ್ಲಾ ಹಿರಿಯ ಕಮಾಂಡರ್ ಸಹಿತ ಐವರು ಮೃತ

ಬೈರೂತ್: ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಝ್ಬುಲ್ಲಾ ಹೋರಾಟಗಾರರ ಗುಂಪಿನ ಹಿರಿಯ ಕಮಾಂಡರ್ ಸಹಿತ ಐದು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ದಕ್ಷಿಣ ಲೆಬನಾನ್‌ನ ಮನೆಯಲ್ಲಿ ಹಿಝ್ಬಲ್ಲಾ ಕಮಾಂಡ್ ಸೆಂಟರ್ ಕಾರ್ಯನಿರ್ವಹಿಸುತ್ತಿರುವ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆದಿದೆ. ಮೃತರಲ್ಲಿ ಅಲಿ ಜಾಫರ್ ಮಾತೌಕ್ ಸಹಿತ ಇಬ್ಬರು ಹಿಝ್ಬುಲ್ಲಾ ಸದಸ್ಯರು ಸೇರಿದ್ದಾರೆ. ಖನಾ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಹಿಝ್ಬುಲ್ಲಾದ ಮತ್ತೊಬ್ಬ ಕಮಾಂಡರ್ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಪೂರ್ವದ ಬೆಕಾ ಕಣಿವೆಯಲ್ಲಿ ಇಸ್ರೇಲ್ ಡ್ರೋನ್ ದಾಳಿ ನಡೆಸಿದ್ದು, ಕಮಾಂಡರ್ ಮುಹಮ್ಮದ್ ಜಬಾರಾ ಮೃತಪಟ್ಟಿದ್ದಾರೆ ಎಂದು ಹಿಝ್ಬುಲ್ಲಾ ಮೂಲಗಳು ಹೇಳಿವೆ. ಇಸ್ರೇಲ್ ವಿರುದ್ಧದ ದಾಳಿ ಮತ್ತು ಡ್ರೋನ್ ದಾಳಿಯ ಸೂತ್ರಧಾರ ಜಬಾರಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

Join Whatsapp
Exit mobile version