ಅಬುಧಾಬಿಯಲ್ಲಿ ಇಸ್ರೇಲ್ ನ ‘ಅತಿದೊಡ್ಡ’ ರಾಯಭಾರಿ ಕಚೇರಿ : ವರದಿ

Prasthutha|

ಅಬುಧಾಬಿ : ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ಇಸ್ರೇಲ್ ತನ್ನ ಅತಿದೊಡ್ಡ ರಾಯಭಾರಿ ಕಚೇರಿ ಆರಂಭಿಸಲಿದೆ ಎಂದು ಇಸ್ರೇಲಿನ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಮುಂದಿನ ತಿಂಗಳ ಆರಂಭದಲ್ಲಿ ಕಚೇರಿ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ.

ರಾಯಭಾರಿ ಕಚೇರಿಯು ದೊಡ್ಡದಾಗಿರಲಿದೆ, ವಾಷಿಂಗ್ಟನ್, ಲಂಡನ್ ಮತ್ತು ಮಾಸ್ಕೊದಲ್ಲಿರುವುದಕ್ಕಿಂತ ದೊಡ್ಡ ರಾಯಭಾರಿ ಕಚೇರಿ ಇಲ್ಲಿ ತೆರಯಲಾಗುತ್ತದೆ ಎಂದು ಇಸ್ರೇಲಿ ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -

ಡಿಸೆಂಬರ್ ಅಂತ್ಯದೊಳಗೆ ಅಥವಾ ಜನವರಿ ಆರಂಭದಲ್ಲಿ ನಾವು ಉದ್ಘಾಟನೆ ಮಾಡುವ ಭರವಸೆ ಹೊಂದಿದ್ದೇವೆ. ಅಬುಧಾಬಿ ಮತ್ತು ದುಬೈಯಲ್ಲಿ ರಾಯಭಾರಿ ಕಚೇರಿಗಳನ್ನು ನಾವು ಹೊಂದಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ.

- Advertisement -