Home ಟಾಪ್ ಸುದ್ದಿಗಳು ಸ್ಥಳಾಂತರಗೊಳ್ಳಲು ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಆದೇಶಿಸಿದ ಇಸ್ರೇಲ್

ಸ್ಥಳಾಂತರಗೊಳ್ಳಲು ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಆದೇಶಿಸಿದ ಇಸ್ರೇಲ್

epa11606097 Syrian refugees load their belongings on a truck as they prepare to leave Wazzani village, southern Lebanon, 15 September 2024. Displaced Syrian refugees, who used to work in agricultural fields in Wazzani village, are leaving the area after leaflets reportedly dropped by the Israel Defense Forces (IDF) demanded the evacuation of civilians from the Wazzani area and surroundings by 4pm local time due to Hezbollah activity in the area. The IDF did not immediately issue an official comment about the evacuation recommendation. EPA-EFE/STR

ಬೈರೂತ್: ದಕ್ಷಿಣ ಲೆಬನಾನ್ ನಿವಾಸಿಗಳಿಗೆ ತಕ್ಷಣವೇ ಅಲ್ಲಿಂದ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಆದೇಶಿಸಿದ್ದು, ನಿವಾಸಿಗಳು ಸ್ಥಳಾಂತರ ಆರಂಭಿಸಿದ್ದಾರೆ.

ಲೆಬನಾನ್ ಗಡಿಭಾಗದ ಗ್ರಾಮದಲ್ಲಿ ರವಿವಾರ ಸ್ಥಳಾಂತರಗೊಳ್ಳುವಂತೆ ಆದೇಶಿಸಿ ಕರಪತ್ರಗಳನ್ನು ಇಸ್ರೇಲ್ ಡ್ರೋನ್‌ಗಳ ಮೂಲಕ ಬೀಳಿಸಿದೆ ಎಂದು ಲೆಬನಾನ್ ಸರಕಾರಿ ನ್ಯೂಸ್ ಏಜೆನ್ಸಿ `ದಿ ನ್ಯಾಷನಲ್ ನ್ಯೂಸ್ ಏಜೆನ್ಸಿ’ ಸೋಮವಾರ ವರದಿ ಮಾಡಿದೆ.

ಶತ್ರುಗಳು ವಝಾನಿ ನಗರದಲ್ಲಿ ಕರಪತ್ರಗಳನ್ನು ಉದುರಿಸಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದವರು ತಕ್ಷಣ ಸ್ಥಳಾಂತರಗೊಳ್ಳಲು ಸೂಚಿಸಿದ್ದಾರೆ. ಕರಪತ್ರದಲ್ಲಿ ಪ್ರದೇಶದ ನಕ್ಷೆ ಹಾಗೂ ಸ್ಥಳಾಂತರಗೊಳ್ಳಬೇಕಾದ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ ಎಂದು ವರದಿ ಹೇಳಿದೆ.

ಇದೇ ಮೊದಲ ಬಾರಿಗೆ ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಇಸ್ರೇಲ್ ಆದೇಶಿಸಿದೆ. ಆದರೆ ಈ ಕರಪತ್ರಗಳನ್ನು ಸೇನೆಯ ತುಕಡಿಯೊಂದು ಅನುಮತಿ ಪಡೆಯದೆ ಉದುರಿಸಿದೆ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ.

Join Whatsapp
Exit mobile version