Home ಟಾಪ್ ಸುದ್ದಿಗಳು ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ನಿಂದ ಮತ್ತೆ ವೈಮಾನಿಕ ದಾಳಿ

ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ ನಿಂದ ಮತ್ತೆ ವೈಮಾನಿಕ ದಾಳಿ

ಕದನ ವಿರಾಮ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಇಸ್ರೇಲ್‌ ಗಾಝಾ ಪಟ್ಟಿಯತ್ತ ಮತ್ತೊಮ್ಮೆ ವೈಮಾನಿಕ ದಾಳಿ ಮಾಡಿದೆ. ಫೆಲೆಸ್ತೀನಿಯನ್‌ ಕಡೆಯಿಂದ ಸ್ಪೋಟಕ ಬಲೂನ್‌ ಗಳನ್ನು ಹಾರಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ಹನ್ನೊಂದು ದಿನಗಳ ಕಾಲ ಗಾಝಾ ಮೇಲೆ ಬಾಂಬ್‌ ದಾಳಿ ಮಾಡಿದ್ದ ಇಸ್ರೇಲ್‌ ಬಳಿಕ ಕದನ ವಿರಾಮ ಘೋಷಿಸಿತ್ತು. ಆ ನಂತರ ಇದೀಗ ಕದನ ವಿರಾಮ ಉಲ್ಲಂಘಿಸಲಾಗಿದೆ. ಬುಧವಾರ ನಸುಕಿನ ವೇಳೆ ಈ ದಾಳಿ ನಡೆದಿದೆ.

ಗಾಝಾ ಸಿಟಿ ಮತ್ತು ಖಾನ್‌ ಯೂನಿಸ್‌ ನ ಹಮಾಸ್‌ ಆವರಣಗಳಲ್ಲಿನ ತನ್ನ ವಿಮಾನಗಳಿಗೆ ಹಾನಿ ಮಾಡಲಾಗಿದೆ ಎಂದು ಇಸ್ರೇಲಿ ಸೇನೆ ಮೂಲಗಳು ಆಪಾದಿಸಿವೆ.

ಇಸ್ರೇಲ್‌ ದಾಳಿಯ ಬಗ್ಗೆ ಹಮಾಸ್‌ ವಕ್ತಾರರು ದೃಢಪಡಿಸಿದ್ದಾರೆ. ಇಂತಹ ದಾಳಿಗೆ ತಮ್ಮ ಧೈರ್ಯಶಾಲಿ ಪ್ರತಿರೋಧ ಮತ್ತು ತಮ್ಮ ಹಕ್ಕುಗಳು ಮತ್ತು ಜೆರುಸಲೇಂನ ಪವಿತ್ರ ತಾಣಗಳನ್ನು ರಕ್ಷಿಸಿಕೊಳ್ಳಲು ಫೆಲೆಸ್ತೀನಿಯನ್ನರು ಬದ್ಧರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಾಂಬ್‌ ದಾಳಿಯಿಂದ ಪ್ರಾಣ ಹಾನಿ, ಆಸ್ತಿಪಾಸ್ತಿ ನಷ್ಟಗಳಾದ ಬಗ್ಗೆ ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

Join Whatsapp
Exit mobile version