Home ಟಾಪ್ ಸುದ್ದಿಗಳು ಮಧ್ಯಪ್ರಾಚ್ಯ ಪ್ರದೇಶವನ್ನು ಇರಾನ್ ಗಿಂತ ಇಸ್ರೇಲ್ ಹೆಚ್ಚು ಅಸ್ಥಿರಗೊಳಿಸುತ್ತದೆ : ರಷ್ಯಾ ರಾಯಭಾರಿ

ಮಧ್ಯಪ್ರಾಚ್ಯ ಪ್ರದೇಶವನ್ನು ಇರಾನ್ ಗಿಂತ ಇಸ್ರೇಲ್ ಹೆಚ್ಚು ಅಸ್ಥಿರಗೊಳಿಸುತ್ತದೆ : ರಷ್ಯಾ ರಾಯಭಾರಿ

ಮಾಸ್ಕೊ : ಮಧ್ಯಪ್ರಾಚ್ಯ ಪ್ರದೇಶವನ್ನು ಇರಾನ್ ಗಿಂತ ಹೆಚ್ಚು ಇಸ್ರೇಲ್ ಹೆಚ್ಚು ಅಸ್ಥಿರಗೊಳಿಸುತ್ತದೆ ಎಂದು ರಷ್ಯಾ ರಾಯಭಾರಿ ಅನಾಟೊಲಿ ವಿಕ್ಟೊರ್ವೊವ್ ಹೇಳಿದ್ದಾರೆ. ‘ದ ಜೆರುಸಲೇಂ ಪೋಸ್ಟ್’ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರದೇಶದಲ್ಲಿ ಇರಾನಿಯನ್ ಚಟುವಟಿಕೆಗಳಿಂದ ಸಮಸ್ಯೆಯಿಲ್ಲ. ಇಸ್ರೇಲ್-ಅರಬ್ ಮತ್ತು ಇಸ್ರೇಲ್-ಪೆಲೆಸ್ತಿನಿಯನ್ ಘರ್ಷಣೆಯ ವಿಚಾರದಲ್ಲಿ ವಿಶ್ವಸಂಸ್ಥೆಯ ನಿರ್ಣಯಕ್ಕೆ ಸಂಬಂಧಿಸಿ ದೇಶಗಳ ನಡುವೆ ಅರಿವಿನ ಕೊರತೆಯಿದೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್ ಹಿಝ್ಬೊಲ್ಲಾ ಮೇಲೆ ದಾಳಿ ನಡೆಸುತ್ತಿದೆ, ಹಿಝ್ಬೊಲ್ಲಾ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.  

Join Whatsapp
Exit mobile version