ಜೆರುಸಲೇಂನಲ್ಲಿ ದೌರ್ಜನ್ಯ ಮುಂದುವರಿಸಿದ ಇಸ್ರೇಲ್

Prasthutha|

►ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ತೀವ್ರ ಖಂಡನೆ

- Advertisement -

ಜೆರುಸಲೇಂನಲ್ಲಿ ಇಸ್ರೇಲಿ ಭದ್ರತಾ ಪಡೆಗಳು ದೌರ್ಜನ್ಯ ಮುಂದುವರಿಸಿದ್ದು, ಇಸ್ರೇಲ್ ಈ ಮೂಲಕ ಕದನ ವಿರಾಮ ಒಪ್ಪಂದವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಮುಂದುವರಿಸಿದೆ ಎಂದು ಫೆಲೆಸ್ತೀನ್ ಆರೋಪಿಸಿದೆ.

ಇಸ್ರೇಲ್ ನಲ್ಲಿ ಹೊಸ ಸಮ್ಮಿಶ್ರ ಸರ್ಕಾರ ರಚನೆಯನ್ನು ವಿಫಲಗೊಳಿಸಲು ಪ್ರಧಾನಿ ನೆತನ್ಯಾಹು ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ಫೆಲೆಸ್ತೀನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ. ಕದನ ವಿರಾಮದ ನಂತರವೂ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿದ್ದು, ಜೆರುಸಲೇಂನಲ್ಲಿ ಇಸ್ರೇಲ್ ತನ್ನ ಪ್ರಚೋದನಕಾರಿ ಕ್ರಮಗಳನ್ನು ಮುಂದುವರಿಸಿದರೆ ಪರಿಣಾಮಗಳು ಗಂಭೀರವಾಗಿರುತ್ತವೆ ಎಂದು ಎಚ್ಚರಿಸಿವೆ.

- Advertisement -

ಜೆರುಸಲೇಂನಲ್ಲಿ ಪತ್ರಕರ್ತರು ಮತ್ತು ಸರ್ಕಾರೇತರ ಏಜೆನ್ಸಿ ಪ್ರತಿನಿಧಿಗಳ ವಿರುದ್ಧ ಇಸ್ರೇಲ್ ದೌರ್ಜನ್ಯ ನಡೆಸಿದ್ದು, ಅಲ್ ಜಝೀರಾ ಪತ್ರಕರ್ತನನ್ನು ನಿನ್ನೆ ಇಸ್ರೇಲ್ ಸೈನಿಕರು ಬಂಧಿಸಿದ್ದಾರೆ. ಫೆಲೆಸ್ತೀನಿಯನ್ ಮಹಿಳಾ ಹೋರಾಟಗಾರ್ತಿಯನ್ನು ಕೂಡ ಬಂಧಿಸಿ ಕೆಲವು ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ. ಇಸ್ರೇಲ್ ಸೈನಿಕರ ಹಿಂಸಾಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಕದನ ವಿರಾಮ ಘೋಷಣೆಯ ನಂತರ ಹಲವಾರು ಫೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ.

Join Whatsapp