Home ಜಾಲತಾಣದಿಂದ ಆಕ್ರಮಿತ ಪಶ್ಚಿಮ ದಂಡೆಯಿಂದ ಸೇನೆ ಹಿಂಪಡೆಯುವ ಒಪ್ಪಂದ ರದ್ದು ಮಾಡಿದ ಇಸ್ರೇಲ್

ಆಕ್ರಮಿತ ಪಶ್ಚಿಮ ದಂಡೆಯಿಂದ ಸೇನೆ ಹಿಂಪಡೆಯುವ ಒಪ್ಪಂದ ರದ್ದು ಮಾಡಿದ ಇಸ್ರೇಲ್

ವೆಸ್ಟ್‌ ಬ್ಯಾಂಕ್: ಇಸ್ರೇಲ್ ಸರಕಾರವು ನಿನ್ನೆ ಸಂಸತ್ತಿನಲ್ಲಿ ಪಶ್ಚಿಮ ದಂಡೆ ಆಕ್ರಮಿತ ಪ್ರದೇಶದಿಂದ ತನ್ನ ಸೇನೆಯನ್ನು ಹಿಂಪಡೆಯುವ ಒಪ್ಪಂದವನ್ನು ರದ್ದು ಪಡಿಸಿತು. ಆ ಮೂಲಕ ಪ್ಯಾಲೆಸ್ತೀನ್‌ನಿಂದ ವಶಪಡಿಸಿಕೊಂಡ ಪಶ್ಚಿಮ ದಂಡೆ ತನ್ನದೆ ಎಂದು ಮಗುಮ್ಮಾಗಿ ಹೇಳಿದೆ.

ಇದರ ನಡುವೆ ಇಸ್ರೇಲ್ ಅಧಿಕಾರಿಗಳು ಪಶ್ಚಿಮ ದಂಡೆ ವ್ಯವಹಾರವನ್ನು ಜೂದಿಯಾ ಮತ್ತು ಸಮರಿಯಾ ಆಡಳಿತ ಎಂದು ಪುರಾತನ ಹಳೆಯ ಒಡಂಬಡಿಕೆಯ ಕಾಲದ ಹೆಸರು ಬಳಸತೊಡಗಿದೆ. ಇದೆಲ್ಲ ಪ್ಯಾಲೆಸ್ತೀನ್ ದೇಶವನ್ನು ಮಾನಸಿಕವಾಗಿ ಬಾಧಿಸುವ ಇಸ್ರೇಲ್ ಪ್ರಯತ್ನಗಳಾಗಿವೆ ಎನ್ನಲಾಗುತ್ತಿದೆ.

Join Whatsapp
Exit mobile version